ಬ್ರೆಝಿಲ್ ಫುಟ್ಬಾಲ್ ತಂಡದ ಕೋಚ್ ಆಗಿ ಡೊರಿವಲ್ ಜೂನಿಯರ್ ನೇಮಕ
Update: 2024-01-11 23:25 IST
ಡೊರಿವಲ್ |Photo: @Ancelmocom \ X
ರಿಯೋ ಡಿ ಜನೈರೊ: ಕೋಪಾ ಲಿಬರ್ಟಡೋರ್ಸ್ ಹಾಗೂ ಬ್ರೆಝಿಲಿಯನ್ ಕಪ್ ವಿಜೇತ ಫ್ಲಮೆಂಗೊದ ಮ್ಯಾನೇಜರ್ ಆಗಿದ್ದ ಡೊರಿವಲ್ ಜೂನಿಯರ್ ಬ್ರೆಝಿಲ್ ಫುಟ್ಬಾಲ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ ಎಂದು ಬ್ರೆಝಿಲಿಯನ್ ಫುಟ್ಬಾಲ್ ಕಾನ್ಫೆಡರೇಶನ್(ಸಿಬಿಎಫ್)ಬುಧವಾರ ತಿಳಿಸಿದೆ.
ಬ್ರೆಝಿಲ್ 2022ರಲ್ಲಿ ಕ್ರೊಯೇಶಿಯ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ ಸೋಲನುಭವಿಸಿ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿತ್ತು. ಇದೇ ಕಾರಣಕ್ಕೆ ಆಗಿನ ಕೋಚ್ ಟೇಟ್ರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಇದೀಗ 61ರ ಹರೆಯದ ಡೊರಿವಲ್ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ಕೋಚಿಂಗ್ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಫರ್ನಾಂಡೊ ಡಿನಿಝ್ ಅವರು ಹಂಗಾಮಿ ಕೋಚ್ ಆಗಿದ್ದರು.
ಎಡ್ನಾಲ್ಡೊ ರಾಡ್ರಿಗಸ್ ಸಿಬಿಎಫ್ ನ ಮುಖ್ಯಸ್ಥರಾಗಿ ಮರು ನೇಮಕಗೊಂಡ ಒಂದು ದಿನದ ನಂತರ ಡಿನಿಝ್ರನ್ನು ಕೋಚ್ ಹುದ್ದೆಯಿಂದ ವಜಾಗೊಳಿಸಲಾಗಿದೆ.