ದುಲೀಪ್ ಟ್ರೋಫಿ: ಪಶ್ಚಿಮ ವಲಯದ ನಾಯಕತ್ವ ತಿರಸ್ಕರಿಸಿದ ಶ್ರೇಯಸ್ ಅಯ್ಯರ್
Update: 2025-08-24 21:55 IST
ಶ್ರೇಯಸ್ ಅಯ್ಯರ್ | PC : PTI
ಹೊಸದಿಲ್ಲಿ, ಆ.24: ಭಾರತ ಏಕದಿನ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಪಶ್ಚಿಮ ವಲಯದ ನಾಯಕತ್ವದ ಆಫರನ್ನು ತಿರಸ್ಕರಿಸಿದ ನಂತರ ರಾಷ್ಟ್ರೀಯ ಆಯ್ಕೆಗಾರರು ಆಲ್ ರೌಂಡರ್ ಶಾರ್ದುಲ್ ಠಾಕೂರ್ ಅವರಿಗೆ ನಾಯಕತ್ವದ ಹೊಣೆ ವಹಿಸಿದರು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ದುಲೀಪ್ ಟ್ರೋಫಿ ಪಂದ್ಯಾವಳಿಗೆ ಆಟಗಾರನಾಗಿ ಮಾತ್ರ ಲಭ್ಯ ಇರುತ್ತೇನೆ ಎಂದು ಅಯ್ಯರ್ ದೃಢಪಡಿಸಿದ್ದಾರೆ.
ತಂಡದ ನಾಯಕತ್ವವಹಿಸಬೇಕೆಂಬ ಪಶ್ಚಿಮ ವಲಯದ ಆಯ್ಕೆ ಸಮಿತಿಯ ಆಫರ್‌ನ್ನು ಅಯ್ಯರ್ ತಿರಸ್ಕರಿಸಿದ್ದರು. ಆ ನಂತರ ಅಯ್ಕೆ ಸಮಿತಿಯ ಅಧ್ಯಕ್ಷ ಸಂಜಯ್ ಪಾಟೀಲ್ ಅವರು ಪಶ್ಚಿಮ ವಲಯವನ್ನು ಮುನ್ನಡೆಸಲು ಶಾರ್ದುಲ್‌ರನ್ನು ಸಂಪರ್ಕಿಸಿದ್ದರು. ಈ ಅವಕಾಶವನ್ನು ಶಾರ್ದುಲ್ ಸಂತೋಷದಿಂದ ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ.