×
Ad

ದುಲೀಪ್ ಟ್ರೋಫಿ: ದಾನಿಶ್ ಮಲೆವಾರ್, ರಜತ್ ಪಾಟಿದಾರ್ ಶತಕ

ಬೃಹತ್ 432 ರನ್ ಕಲೆ ಹಾಕಿದ ಮಧ್ಯ ವಲಯ

Update: 2025-08-28 20:34 IST

PC : PTI 

ಬೆಂಗಳೂರು, ಆ. 28: ದುಲೀಪ್ ಟ್ರೋಫಿ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್ ಪಂದ್ಯದ ಮೊದಲ ದಿನವಾದ ಗುರುವಾರ ಈಶಾನ್ಯ ವಲಯದ ವಿರುದ್ಧ ಮಧ್ಯ ವಲಯ ತನ್ನ ಮೊದಲ ಇನಿಂಗ್ಸ್‌ ನಲ್ಲಿ ಎರಡು ವಿಕೆಟ್‌ ಗಳ ನಷ್ಟಕ್ಕೆ ಬೃಹತ್ 432 ರನ್‌ಗಳನ್ನು ಪೇರಿಸಿದೆ.

ದಾನಿಶ್ ಮಲೆವಾರ್ (198) ಮತ್ತು ನಾಯಕ ರಜತ್ ಪಾಟಿದಾರ್ (125) ಶತಕಗಳನ್ನು ಸಿಡಿಸಿ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. 219 ಎಸೆತಗಳಲ್ಲಿ 198 ರನ್‌ ಗಳನ್ನು ಗಳಿಸಿದ ದಾನಿಶ್ ಅಜೇಯವಾಗಿ ಉಳಿದರು.

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಟೇಡಿಯಮ್‌ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಈಶಾನ್ಯ ವಲಯ ಎದುರಾಳಿಯನ್ನು ಮೊದಲು ಬ್ಯಾಟಿಂಗ್‌ ಗೆ ಇಳಿಸಿತು.

ಆರಂಭಿಕ ಬ್ಯಾಟರ್ ಆರ್ಯನ್ ಜೂಯಲ್ 100 ಎಸೆತಗಳಲ್ಲಿ 60 ರನ್ ಗಳಿಸಿ ಗಾಯಗೊಂಡು ನಿವೃತ್ತಿಯಾದರು.

ರಜತ್ ಪಾಟಿದಾರ್ ಮತ್ತು ದಾನಿಶ್ ಮಲೆವಾರ್ ಎರಡನೇ ವಿಕೆಟ್‌ ಗೆ 283 ರನ್‌ಗಳನ್ನು ಸೇರಿಸಿದರು. ಬಳಿಕ ಮುರಿಯದ ಮೂರನೇ ವಿಕೆಟ್‌ಗೆ ಮಲೆವಾರ್ ಮತ್ತು ಯಥ್ ರಾಥೋಡ್ 85 ರನ್‌ ಗಳನ್ನು ಕೂಡಿಸಿದರು.

ರಾಥೋಡ್ 32 ರನ್‌ಗಳನ್ನು ಗಳಿಸಿ ಔಟಾಗದೆ ಉಳಿದರು.

ಉತ್ತರ ವಲಯ 308-6

ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಇನ್ನೊಂದು ದುಲೀಪ್ ಟ್ರೋಫಿ ಕ್ವಾರ್ಟರ್‌ ಫೈನಲ್ ಪಂದ್ಯದ ಮೊದಲ ದಿನವಾದ ಗುರುವಾರ ಪೂರ್ವ ವಲಯದ ವಿರುದ್ಧ ಉತ್ತರ ವಲಯವು ಮೊದಲ ಇನಿಂಗ್ಸ್‌ ನಲ್ಲಿ 6 ವಿಕೆಟ್‌ ಗಳ ನಷ್ಟಕ್ಕೆ 308 ರನ್ ಗಳಿಸಿದೆ.

ಟಾಸ್ ಗೆದ್ದ ಪೂರ್ವ ವಲಯವು ಎದುರಾಳಿಯನ್ನು ಮೊದಲು ಬ್ಯಾಟಿಂಗ್‌ ಗೆ ಇಳಿಸಿತು.

ಆಯುಶ್ ಬದೋನಿ 60 ಎಸೆತಗಳಲ್ಲಿ 63 ರನ್‌ಗಳನ್ನು ಗಳಿಸಿ ತಂಡದ ಗರಿಷ್ಠ ಸ್ಕೋರ್ ಗಳಿಕೆದಾರರಾದರು. ಉಳಿದಂತೆ ಕಣ್ಣಯ್ಯ ವಧವಾನ್ 42 (ಅಜೇಯ), ಆರಂಭಿಕ ಶುಭಮ್ ಖಜೂರಿಯ 26, ಇನ್ನೋರ್ವ ಆರಂಭಿಕ ಹಾಗೂ ನಾಯಕ ಅಂಕಿತ್ ಕುಮಾರ್ 30, ಯಶ್ ದುಲ್ 39, ನಿಶಾಂತ್ ಸಿಂಧು 47, ಮಾಯಾಂಕ್ ದಗರ್ (ಅಜೇಯ) 28 ರನ್‌ ಗಳ ಕೊಡುಗೆ ನೀಡಿದರು.

ಪೂರ್ವ ವಲಯದ ಪರವಾಗಿ ಮನಿಶಿ 90 ರನ್‌ ಗಳನ್ನು ನೀಡಿ 3 ವಿಕೆಟ್‌ ಗಳನ್ನು ಉರುಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News