ಮುಂದಿನ ವರ್ಷ ದುಬೈನಲ್ಲಿ ಫಿಫಾ ಪ್ರಶಸ್ತಿ ಪ್ರದಾನ ಸಮಾರಂಭ: ಇನ್ಫಾಂಟಿನೊ
ಇನ್ಫಾಂಟಿನೊ |Photo Credit : AP \ PTI
ದುಬೈ, ಡಿ. 29: ಮುಂದಿನ ವರ್ಷ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದುಬೈ ಆಯೋಜಿಸಲಿದೆ ಎಂದು ಫಿಫಾ ಅಧ್ಯಕ್ಷ ಇನ್ಫಾಂಟಿನೊ ಸೋಮವಾರ ಹೇಳಿದ್ದಾರೆ.
ಅಭಿಮಾನಿಗಳು, ಮಾಧ್ಯಮ ಪ್ರತಿನಿಧಿಗಳು, ನಾಯಕರು ಹಾಗೂ ರಾಷ್ಟ್ರೀಯ ತಂಡದ ತರಬೇತುದಾರರು ಆಯ್ಕೆ ಮಾಡುವ ಪುರುಷ ಹಾಗೂ ಮಹಿಳಾ ಆಟಗಾರರು, ತರಬೇತುದಾರರು ಹಾಗೂ ತಂಡಗಳಿಗೆ ಫಿಫಾ ಅತ್ಯುತ್ತಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
‘‘ದುಬೈನಲ್ಲಿ ಅತ್ಯುತ್ತಮ ಆಟಗಾರರು, ತರಬೇತುದಾರರು ಹಾಗೂ ತಂಡಗಳನ್ನು ಗೌರವಿಸಲು ಹೊಸ ಪಾಲುದಾರಿಕೆಯನ್ನು ನಾನು ಘೋಷಿಸುತ್ತಿರುವೆ’’ಎಂದು ಸೋಮವಾರ ನಗರದಲ್ಲಿ ನಡೆದ ವಿಶ್ವ ಕ್ರೀಡಾ ಶೃಂಗಸಭೆಯಲ್ಲಿ ಇನ್ಫಾಂಟಿನೊ ಹೇಳಿದರು.
ದೋಹಾದಲ್ಲಿ ನಡೆದಿದ್ದ 2025ರ ಆವೃತ್ತಿಯ ಫಿಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫ್ರೆಂಚ್‌ನ ಔಸ್ಮಾನೆ ಡೆಂಬೆಲೆ ವರ್ಷದ ಪುರುಷ ಆಟಗಾರ ಹಾಗೂ ಸ್ಪೇನ್ ಮಿಡ್ ಫೀಲ್ಡರ್ ಬೊನ್ಮತಿ ಮಹಿಳಾ ಪ್ರಶಸ್ತಿಯನ್ನು ಗೆದ್ದಿದ್ದರು.