ಫಿಫಾ ಮಹಿಳಾ ವಿಶ್ವಕಪ್ ಫೈನಲ್: ಇಂಗ್ಲೆಂಡ್ ವಿರುದ್ಧ ಗೆದ್ದ ಸ್ಪೇನ್ ವಿಶ್ವ ಚಾಂಪಿಯನ್!
Update: 2023-08-20 19:45 IST
Photo: twitter \ @FIFAWWC
ಸಿಡ್ನಿ: ರವಿವಾರ ಇಲ್ಲಿನ ಆಸ್ಟ್ರೇಲಿಯಾ ಕ್ರೀಡಾಂಗಣದಲ್ಲಿ ನಡೆದ 2023ರ ಫಿಫಾ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸುವ ಮೂಲಕ ಸ್ಪೇನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯದ ಪೂರ್ವಾರ್ಧದಲ್ಲಿ ಓಲ್ಗಾ ಕಾರ್ಮೋನಾ ಅವರ ಗೋಲ್ ನಿಂದ ಸ್ಪೇನ್ ಈ ಐತಿಹಾಸಿಕ ವಿಜಯ ಸಾಧಿಸಿದೆ. ಕಾರ್ಮೋನಾ ವಿಶ್ವಕಪ್ ಪಂದ್ಯಗಳಲ್ಲಿ ಸ್ಪೇನ್ ಪರವಾಗಿ ಸತತ ಗೋಲು ಗಳಿಸಿದ್ದಾರೆ.
ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಪೇನ್ ತಂಡವೊಂದೇ 18 ಗೋಲುಗಳನ್ನು ಗಳಿಸಿದೆ.
ಈ ವಿಜಯದೊಂದಿಗೆ ಸ್ಪೇನ್ ತಂಡವು ಜರ್ಮನಿಯ ನಂತರ ಪುರುಷರ ವಿಶ್ವಕಪ್ ಹಾಗೂ ಮಹಿಳೆಯರ ವಿಶ್ವಕಪ್ ಎರಡನ್ನೂ ಜಯಿಸಿದ ಎರಡನೆ ದೇಶ ಎನುಸಿಕೊಂತು.