×
Ad

ಪ್ಯಾರಾಲಿಂಪಿಕ್ಸ್ ನಲ್ಲಿ ಒಂದೇ ದಿನ ನಾಲ್ಕು ಪದಕ: ಭಾರತಕ್ಕೆ ಚಿನ್ನದ ದಿನ

Update: 2024-09-05 07:42 IST

PC: x.com/the_hindu

ಪ್ಯಾರೀಸ್: ಪ್ಯಾರಾಲಿಂಪಿಕ್ಸ್ ನ ಏಳನೇ ದಿನವಾದ ಬುಧವಾರ ಭಾರತದ ಅಥ್ಲೀಟ್ ಗಳು ಎರಡು ಚಿನ್ನ ಸಹಿತ ನಾಲ್ಕು ಪದಕಗಳನ್ನು ಗೆದ್ದು ದೇಶದ ಒಟ್ಟು ಪದಕಗಳ ಸಂಖ್ಯೆಯನ್ನು 24ಕ್ಕೇರಿಸಿದರು.

ಹರ್ವೀಂದರ್ ಸಿಂಗ್ ಅವರು ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಬಿಲ್ಲುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪುರುಷರ ವೈಯಕ್ತಿಕ ರಿಕರ್ವ್ ಓಪನ್ ಸ್ಪರ್ಧೆಯಲ್ಲಿ ಅವರು ಈ ಸಾಧಣೆ ಮಾಡಿದರು. ಆ ಬಳಿಕ ಧರಮ್ ಬೀರ್ ಸಿಂಗ್ ಕೂಡಾ ಪುರುಷರ ಕ್ಲಬ್ ಥ್ರೋ ಎಫ್51 ಸ್ಪರ್ಧೆಯ ಫೈನಲ್ ನಲ್ಲಿ ಚಿನ್ನ ಜಯಿಸಿದರು. ಈ ಸ್ಪರ್ಧೆಯಲ್ಲಿ ಭಾರತದವರೇ ಆದ ಪ್ರಣವ್ ಸೂರ್ಮಾ ಬೆಳ್ಳಿ ಗೆದ್ದರು. ಧರಮ್ ಬೀರ್ ಅವರು ಏಷ್ಯನ್ ದಾಖಲೆಯೊಂದಿಗೆ ಚಿನ್ನ ಜಯಿಸಿದು. ಇದಕ್ಕೂ ಮುನ್ನ ವಿಶ್ವಚಾಂಪಿಯನ್ ಸಚಿನ್ ಸರ್ಜೆರಾವ್ ಖಿಲಾರಿ ಪುರುಷರ ಎಫ್46 ಶಾಟ್ ಪುಟ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಕ್ಲಬ್ ಥ್ರೋ ಫೈನಲ್ ನಲ್ಲಿ ಭಾರತದ ಪಟುಗಳು ಮೊದಲ ಎರಡೂ ಸ್ಥಾನಗಳನ್ನು ಗೆದ್ದಿರುವುದು ವಿಶೇಷ. ಧರಮ್ ಬೀರ್ ಅವರು 34.92 ಮೀಟರ್ ಅತ್ಯುತ್ತಮ ಥ್ರೋದೊಂದಿಗೆ ಚಿನ್ನ ಪಡೆದರೆ 34.69 ಮೀಟರ್ ದೂರಕ್ಕೆ ಎಸೆಯುವ ಮೂಲಕ ಪ್ರಣವ್ ಸೂರ್ಮಾ ಬೆಳ್ಳಿಯ ಸಾಧನೆ ಮಾಡಿದರು. ಭಾರತದ ಮತ್ತೊಬ್ಬ ಪಟು ಅಮಿತ್ ಕುಮಾರ್ ಕಳಪೆ ಸಾಧನೆ ಪ್ರದರ್ಶಿಸಿ, ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News