×
Ad

ಪ್ರೇಕ್ಷಕರಿಗೆ ಉಚಿತ ಕುಡಿಯುವ ನೀರು: ಬಿಸಿಸಿಐ ಘೋಷಣೆ

Update: 2023-10-05 23:15 IST

ಫೋಟೊ ಕೃಪೆ : twitter/JayShah 

ಹೊಸದಿಲ್ಲಿ : ಬಹು ನಿರೀಕ್ಷಿತ ಏಕದಿನ ವಿಶ್ವಕಪ್ ಟೂರ್ನಿಯು ಗುರುವಾರ ಅಹ್ಮದಾಬಾದ್ ನಲ್ಲಿ ಆರಂಭವಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆಕರ್ಷಕ ಘೋಷಣೆ ಮಾಡಿದ್ದಾರೆ.

ದೇಶದ ವಿವಿಧ 10 ಕ್ರೀಡಾಂಗಣಗಳಲ್ಲಿ ಪಂದ್ಯ ವೀಕ್ಷಿಸಲು ಆಗಮಿಸುವ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ಕುಡಿಯುವ ನೀರನ್ನು ಬಿಸಿಸಿಐ ಒದಗಿಸಲಿದೆ ಎಂದು ತನ್ನ ಅಧಿಕೃತ ಸಾಮಾಜಿಕ ಖಾತೆ x ನಲ್ಲಿ ಜಯ್ ಶಾ ಬರೆದಿದ್ದಾರೆ.

ಅಭಿಮಾನಿಗಳು ಸಾಕಷ್ಟು ನೀರನ್ನು ಕುಡಿಯಬೇಕು ಹಾಗೂ ಏಕದಿನ ವಿಶ್ವಕಪ್ ಪಂದ್ಯಗಳನ್ನು ಆನಂದಿಸಬೇಕು. ವಿಶ್ವಕಪ್ ನಲ್ಲಿ ಮರೆಯಲಾಗದ ಕ್ಷಣಗಳನ್ನು ಸೃಷ್ಟಿಸಬೇಕು ಎಂದು ಶಾ ಸಲಹೆ ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News