×
Ad

ಟೂರ್ನಮೆಂಟ್ ಗೆದ್ದು 5 ತಿಂಗಳಾದರೂ 5.5 ಲಕ್ಷ ರೂ. ಬಹುಮಾನದ ಹಣ ಬಂದಿಲ್ಲ!

ಚೆಸ್ ಫೆಡರೇಶನ್ ವಿರುದ್ಧ ಗ್ರ್ಯಾಂಡ್‌ ಮಾಸ್ಟರ್ ಅಭಿಜಿತ್ ಗುಪ್ತಾ ಆಕ್ರೋಶ

Update: 2026-05-09 21:50 IST

ಗ್ರ್ಯ್ರಾಂಡ್ ಮಾಸ್ಟರ್ ಅಭಿಜಿತ್ ಗುಪ್ತಾ | Photo Credit : PTI 

ಹೊಸದಿಲ್ಲಿ, ಮೇ 9: ಐದು ಕಾಮನ್‌ವೆಲ್ತ್ ಚೆಸ್ ಚಾಂಪಿಯನ್‌ ಶಿಪ್‌ ಗಳನ್ನು ಗೆದ್ದ ಮೊದಲ ಭಾರತೀಯನೆಂಬ ದಾಖಲೆಗೆ ಪಾತ್ರರಾಗಿರುವ ಅರ್ಜುನ ಪ್ರಶಸ್ತಿ ಪುರಸ್ಕೃತ ಚೆಸ್ ಗ್ರ್ಯಾಂಡ್‌ಮಾಸ್ಟರ್ ಅಭಿಜಿತ್ ಗುಪ್ತಾ ಅವರು ಭಾರತದಲ್ಲಿ ಅಥ್ಲೀಟ್‌ಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2026ರ ಜನವರಿಯಲ್ಲಿ ಒಡಿಶಾ ಜಿಎಂ ಓಪನ್ ಟೂರ್ನಮೆಂಟ್ ಗೆದ್ದಿದ್ದಕ್ಕಾಗಿ ತನಗೆ ದೊರೆಯಬೇಕಾಗಿದ್ದ ಬಹುಮಾನದ ಹಣ ಇನ್ನೂ ಪಾವತಿಯಾಗಿಲ್ಲವೆಂದು ಅವರು ಆಪಾದಿಸಿದ್ದಾರೆ.

‘ಟೈಮ್ಸ್ ಆಫ್ ಇಂಡಿಯಾ’ ಸುದ್ದಿ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, ಈ ವಿಷಯದಲ್ಲಿ ಟೂರ್ನಮೆಂಟ್‌ನ ಸಂಘಟಕರು ಹಾಗೂ ಅಖಿಲ ಭಾರತ ಚೆಸ್ ಫೆಡರೇಶನ್ (ಎಐಸಿಎಫ್) ಇಬ್ಬರಲ್ಲೂ ಉತ್ತರದಾಯಿತ್ವದ ಕೊರತೆಯಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

2026ರ ಜನವರಿ 24ರಂದು ಸಮಾರೋಪಗೊಂಡ ಈ ಟೂರ್ನಮೆಂಟ್‌ನಲ್ಲಿ ಹಲವಾರು ಗ್ರ್ಯಾಂಡ್‌ಮಾಸ್ಟರ್‌ಗಳು ಭಾಗವಹಿಸಿದ್ದರು. ಎ ಶ್ರೇಣಿಯ ಸ್ಪರ್ಧೆಯು ಒಟ್ಟು 25 ಲಕ್ಷ ರೂ. ನಗದು ಬಹುಮಾನ ಹೊಂದಿದ್ದು, ವಿಜೇತ ಆಟಗಾರ 5.5 ಲಕ್ಷ ರೂ. ಪಡೆಯಲಿದ್ದಾರೆ. ಬಹುಮಾನದ ಹಣವು ಒಂದೆರಡು ವಾರಗಳೊಳಗೆ ತನ್ನ ಖಾತೆಗೆ ವರ್ಗಾವಣೆಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾಗಿ ಗುಪ್ತಾ ಹೇಳಿದ್ದಾರೆ.

ಆದರೆ ತಿಂಗಳುಗಳು ಕಳೆದರೂ ಹಣ ಪಾವತಿಯಾಗಲಿಲ್ಲ ಮತ್ತು ಸಂಘಟಕರಿಂದ ಯಾವುದೇ ಉತ್ತರವಿಲ್ಲವೆಂದು ಗುಪ್ತಾ ಹೇಳಿದರು.

ಬಳಿಕ ಗುಪ್ತಾ ಅಖಿಲ ಭಾರತ ಚೆಸ್ ಒಕ್ಕೂಟವನ್ನು ಸಂಪರ್ಕಿಸಿದರೂ, ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲವೆಂದು ಅವರು ಹೇಳಿದರು.

ಅರ್ಜುನ ಪ್ರಶಸ್ತಿ ಪುರಸ್ಕೃತನಿಗೇ ಇಂತಹ ಪರಿಸ್ಥಿತಿ ಬಂದಿರುವಾಗ, ತಳಮಟ್ಟದ ಆಟಗಾರರಿಗೆ ಯಾವೆಲ್ಲಾ ಸಂಕಷ್ಟಗಳು ಉಂಟಾಗಬಹುದು ಎಂಬುದನ್ನು ನೀವೇ ಊಹಿಸಿ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News