×
Ad

ಹಾಕಿ ಇಂಡಿಯಾಕ್ಕೆ ಶತಕದ ಸಂಭ್ರಮ: ದಂತಕತೆಗಳಿಗೆ ಗೌರವ, ಸ್ಮರಣ ಸಂಚಿಕೆ ಬಿಡುಗಡೆ

Update: 2025-11-07 22:02 IST

PC : thehindu.com

ಹೊಸದಿಲ್ಲಿ, ನ.7: ರಾಷ್ಟ್ರ ರಾಜಧಾನಿಯ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಹಾಕಿ ಇಂಡಿಯಾದ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ತಲೆಮಾರುಗಳಿಂದ ಭಾರತದ ಹಾಕಿಯನ್ನು ಬೆಳೆಸಿ ಉಳಿಸಿದ ಹಾಕಿ ದಂತಕತೆಗಳನ್ನು ಗೌರವಿಸಲಾಯಿತು.

ಹಾಕಿ ಲೆಜೆಂಡ್‌ಗಳಾದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಗುರ್ಬಕ್ಸ್ ಸಿಂಗ್ ಹಾಗೂ ಅಸ್ಲಾಂ ಶೇರ್ ಖಾನ್, ಬ್ರಿಗೇಡಿಯರ್ ಹರ್‌ಚರಣ್ ಸಿಂಗ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯ, ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಈ ವೇಳೆ ಉಪಸ್ಥಿತರಿದ್ದರು.

ದಿನದಾರಂಭದಲ್ಲಿ ಮಾಂಡವಿಯ ನೇತೃತ್ವದ ಸ್ಪೋರ್ಟ್ಸ್‌ ಮಿನಿಸ್ಟರ್ ಇಲೆವೆನ್ ಹಾಗೂ ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ ನಾಯಕತ್ವದ ಹಾಕಿ ಇಂಡಿಯಾ ಇಲೆವೆನ್ ನಡುವೆ ಪ್ರದರ್ಶನದ ಪಂದ್ಯ ನಡೆಯಿತು. ಸ್ಪೋರ್ಟ್ಸ್ ಮಿನಿಸ್ಟರ್ ತಂಡವು 3-1 ಅಂತರದಿಂದ ಜಯಶಾಲಿಯಾಯಿತು.

ಐತಿಹಾಸಿಕ ಸಂದರ್ಭಕ್ಕೆ ಪೂರಕವಾಗಿ ‘‘ಭಾರತೀಯ ಹಾಕಿಯ 100 ವರ್ಷಗಳು’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಇದು 1928ರ ಆ್ಯಮ್‌ಸ್ಟರ್‌ಡಮ್ ಒಲಿಂಪಿಕ್ಸ್‌ನಿಂದ ತೊಡಗಿ ಆಧುನಿಕ ಯುಗದ ತನಕದ ಕ್ರೀಡೆಯ ವಿಕಸನವನ್ನು ವಿವರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News