×
Ad

ಐಸಿಸಿ ಟೆಸ್ಟ್ ಆಟಗಾರರ ರ‍್ಯಾಂಕಿಂಗ್‌ : ನಾಲ್ಕನೇ ಸ್ಥಾನಕ್ಕೇರಿದ ಜಸ್‌ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ ಆರನೇ ಸ್ಥಾನಕ್ಕೆ

Update: 2024-01-10 23:59 IST

PTI Photo

Read more at:

http://timesofindia.indiatimes.com/articleshow/106690493.cms?utm_source=contentofinterest&utm_medium=text&utm_campaign=cppst

ಹೊಸದಿಲ್ಲಿ: ಸಿಡ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯದ ಸರಣಿ ವಿಜಯ ಹಾಗೂ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಐತಿಹಾಸಿಕ ಟೆಸ್ಟ್ ಪಂದ್ಯದ ನಂತರ ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಬದಲಾವಣೆಯಾಗಿದೆ.

ಬೌಲಿಂಗ್ ವಿಭಾಗದಲ್ಲಿ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ (787)ನಾಲ್ಕನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ತನ್ನ ಸಹ ಆಟಗಾರ ರವೀಂದ್ರ ಜಡೇಜರನ್ನು ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ 7 ವಿಕೆಟ್‌ಗಳನ್ನು(6-15, 1-31)ಕಬಳಿಸಿದ್ದ ಮುಹಮ್ಮದ್ ಸಿರಾಜ್ 13 ಸ್ಥಾನ ಭಡ್ತಿ ಪಡೆದು 661 ಅಂಕದೊಂದಿಗೆ ಜೀವನಶ್ರೇಷ್ಠ 17ನೇ ರ‍್ಯಾಂಕ್ ತಲುಪಿದ್ದಾರೆ.

ದಕ್ಷಿಣ ಆಫ್ರಿಕಾದ ಲುಂಗಿ ಗಿಡಿ 9 ಸ್ಥಾನ ಮೇಲಕ್ಕೇರಿ 28ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್(858)ಕಾಗಿಸೊ ರಬಾಡವನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದಿದ್ದಾರೆ. ಕಮಿನ್ಸ್ ಸಹ ಆಟಗಾರ ಜೋಶ್ ಹೇಝಲ್‌ವುಡ್ 11ನೇ ಸ್ಥಾನದಿಂದ ಜಂಟಿ 7ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್‌ರೊಂದಿಗೆ 7ನೇ ಸ್ಥಾನ ಹಂಚಿಕೊಂಡಿದ್ದಾರೆ.

ಬ್ಯಾಟಿಂಗ್ ರ‍್ಯಾಂಕಿಂಗ್‌ ನಲ್ಲಿ ಆಸ್ಟ್ರೇಲಿಯದ ಮಾರ್ನಸ್ ಲಾಬುಶೇನ್ ನಾಲ್ಕನೇ ಸ್ಥಾನ(802)ಪಡೆದರೆ, ಸ್ಟೀವನ್ ಸ್ಮಿತ್ (818)ಮೂರನೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ 88 ಹಾಗೂ 28 ರನ್ ಗಳಿಸಿದ್ದ ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟರ್ ಮುಹಮ್ಮದ್ ರಿಝ್ವಾನ್ 10 ಸ್ಥಾನ ಮೇಲಕ್ಕೇರಿ 17ನೇ ಸ್ಥಾನ ತಲುಪಿದ್ದಾರೆ. ನ್ಯೂಲ್ಯಾಂಡ್ಸ್ ಪಿಚ್‌ನಲ್ಲಿ ಭಾರತ ವಿರುದ್ಧ ಶತಕ ಗಳಿಸಿ ಪ್ರತಿರೋಧ ಒಡ್ಡಿದ್ದ ದಕ್ಷಿಣ ಆಫ್ರಿಕಾದ ಮಾರ್ಕ್ರಮ್ ಅಗ್ರ-20ರೊಳಗೆ ಪ್ರವೇಶಿಸಿದರು.

ಭಾರತದ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ(775) ಹಾಗೂ ರೋಹಿತ್ ಶರ್ಮಾ(748)ಕ್ರಮವಾಗಿ ಆರನೇ ಹಾಗೂ 10ನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News