×
Ad

ಡೇವೊನ್‌ ಕಾನ್ವೆ ಶತಕ, ನ್ಯೂಝಿಲ್ಯಾಂಡ್ ಗೆ ಗೆಲ್ಲಲು ಬೇಕು 72 ರನ್

Update: 2023-10-05 20:04 IST

ಡೇವನ್ ಕಾನ್ವೆ | @ICC

ಅಹ್ಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ನ ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡದ ಡೆವೋನ್‌ ಕಾನ್ವೆ ಶತಕ ಬಾರಿಸಿದ್ದಾರೆ. ಸ್ಪೋಟಕ ಹೊಡೆತಗಳಿಂದ 83 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಗಳ ಮೂಲಕ 100 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿಯತ್ತ ಕೊಂಡೊಯ್ಯುತ್ತಿದ್ದಾರೆ. ಆ ಮೂಲಕ 2023ರ ವಿಶ್ವಕಪ್ ನ ಮೊದಲ ಶತಕ ದಾಖಲಿಸಿದ್ದಾರೆ.

ನಿಧಾನಗತಿಯ ಆರಂಭ ಮಾಡಿದ ನ್ಯೂಝಿಲ್ಯಾಂಡ್ ತಂಡಕ್ಕೆ ವಿಲ್ ಯಂಗ್ ಅವರು ಶೂನ್ಯ ಸುತ್ತಿದಾಗ ಕ್ರೀಸ್ಗೆ ಬಂದ ರಚಿನ್ ರವೀಂದ್ರ ರನ್ ಗಳಿಕೆಗೆ ವೇಗ ನೀಡಿದರು.

ಮೊದಲ ಕ್ರಮಾಂಕದಲ್ಲಿ ಕ್ರೀಸ್ ನಲ್ಲಿದ್ದ ಡೆವೋನ್‌ ಕಾನ್ವೆ, ರಚಿನ್ ರನ್ ಗಳಿಕೆಗೆ ಲಯ ಒದಗಿಸಿದರು. ಬೌಂಡರಿ ಸಿಕ್ಸರ್ಗಳ ಮೂಲಕ ಏಕದಿನ ಕ್ರಿಕೆಟ್ಗೆ ಚುಟುಕು ಕ್ರಿಕಟ್ ವೇಗ ನೀಡಿದ ಡೆವೋನ್‌ ಕಾನ್ವೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಖಾಲಿ ಬಿದ್ದ ಆಸನಗಳಿಗೂ ತಮ್ಮ ಬ್ಯಾಟ್ ನಿಂದ ಸಿಡಿದ ಚೆಂಡಿನ ರುಚಿ ತೋರಿಸಿದರು.

29.4 ಓವರ್ ಗಳಲ್ಲಿ 209 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದೆ. ರಚಿನ್ ರವೀಂದ್ರ 98 ಶತಕದ ಸನಿಹದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News