ಪತಿ, ಮಾಜಿ ಕಬಡ್ಡಿ ಆಟಗಾರ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ ಭಾರತದ ಬಾಕ್ಸರ್ ಸವೀಟಿ ಬೂರಾ
Update: 2025-02-27 22:03 IST
ಸವೀಟಿ ಬೂರಾ | PC : saweetyboora \ instagram.com
ಚಂಡಿಗಡ: ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಹಲ್ಲೆ ಆರೋಪದಲ್ಲಿ ತನ್ನ ಪತಿ ಹಾಗೂ ಕಬಡ್ಡಿ ಆಟಗಾರ ದೀಪಕ್ ಹೂಡಾ ವಿರುದ್ಧ ಭಾರತದ ಬಾಕ್ಸರ್ ಸವೀಟಿ ಬೂರಾ ಎಫ್‌ಐಆರ್ ದಾಖಲಿಸಿದ್ದಾರೆ.
ಹರ್ಯಾಣದ ಹಿಸಾರ್‌ನಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 85ರ ಅಡಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸರು ಹೂಡಾಗೆ ಹಲವು ನೋಟಿಸ್‌ಗಳನ್ನು ಜಾರಿಗೊಳಿಸಿದ್ದು, ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ ಹಾಜರಾಗಿಲ್ಲ.
ಅರ್ಜುನ ಪ್ರಶಸ್ತಿ ವಿಜೇತೆ ಹಾಗೂ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸವೀಟಿ ಬೂಟಾ, ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಕಬಡ್ಡಿ ಆಟಗಾರ, ಪತಿ ದೀಪಕ್ ಹೂಡಾ ಹಾಗೂ ಅವರು ಕುಟುಂಬದ ವಿರುದ್ಧ ಹರ್ಯಾಣದ ಹಿಸಾರ್‌ನಲ್ಲಿ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ.
ಈ ಇಬ್ಬರು 2022ರಲ್ಲಿ ವಿವಾಹವಾಗಿದ್ದರು.