×
Ad

ಇಂಡಿಯನ್ ಸೂಪರ್ ಲೀಗ್ 2023-24 ; ಬೆಂಗಳೂರು ಎಫ್ಸಿಗೆ ಸೇರ್ಪಡೆಯಾದ ನಿಖಿಲ್ ಪೂಜಾರಿ

Update: 2024-01-31 21:45 IST

ನಿಖಿಲ್ ಪೂಜಾರಿ  | Photo: indiansuperleague.com 

ಚೆನ್ನೈ: ಹೈದರಾಬಾದ್ ಎಫ್ಸಿಯಿಂದ ಆಟಗಾರರ ನಿರ್ ಗಮನ ಪ್ರಕ್ರಿಯೆ ಮುಂದುವರಿದಿದೆ. ಭಾರತೀಯ ರಾಷ್ಟ್ರೀಯ ತಂಡದ ಆಟಗಾರ ನಿಖಿಲ್ ಪೂಜಾರಿ ಬೆಂಗಳೂರು ಎಫ್ಸಿಯನ್ನು ಸೇರ್ಪಡೆಯಾಗಿದ್ದಾರೆ ಎಂದು ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್)ಕ್ಲಬ್ ಬುಧವಾರ ತಿಳಿಸಿದೆ.

ನಿಖಿಲ್ ಪೂಜಾರಿ ಅವರು ಹೈದರಾಬಾದ್ ಎಫ್ಸಿಯಲ್ಲಿ ತನ್ನೊಂದಿಗೆ ಆಡಿದ್ದ ಮಾಜಿ ಸಹ ಆಟಗಾರರಾದ ಚಿಂಗ್ಲೆಸನಾ ಸಿಂಗ್ ಹಾಗೂ ಹಾಲಿಚರಣ್ ಹಾಗೂ ರೋಹಿತ್ ದಾನು ಅವರನ್ನು ಸೇರಿಕೊಂಡಿದ್ದಾರೆ. ಚಿಂಗ್ಲೆಸನಾ ಕೆಲವೇ ದಿನಗಳ ಹಿಂದೆ ಬೆಂಗಳೂರು ಎಫ್ಸಿ ಸೇರಿದ್ದರು.

ನಿಖಿಲ್ ಇತ್ತೀಚೆಗೆ ಎಎಫ್ಸಿ ಏಶ್ಯನ್ ಕಪ್ನಲ್ಲಿ ಆಡಿದ್ದರು. ಮೂರು ಪಂದ್ಯಗಳಲ್ಲಿ ಎರಡರಲ್ಲಿ ಆಡಿದ್ದರು. ಸಿರಿಯಾ ವಿರುದ್ಧದ ಮೂರನೇ ಪಂದ್ಯದಲ್ಲಿ ಆಡಿರಲಿಲ್ಲ. ಭಾರತವು ಗ್ರೂಪ್ ಹಂತದಲ್ಲೇ ಟೂರ್ನಿಯಿಂದ ನಿರ್ ಗಮಿಸಿತ್ತು.

ಹೈದರಾಬಾದ್ ಎಫ್ಸಿ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ತನ್ನ ಹೆಚ್ಚಿನ ಆಟಗಾರರಿಗೆ ವೇತನ ನೀಡಲು ಅಸಮರ್ಥವಾಗಿತ್ತು. ಹೀಗಾಗಿ ಹಲವು ಆಟಗಾರರು ಕ್ಲಬ್ಬನ್ನು ಅರ್ಧಕ್ಕೆ ತೊರೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News