×
Ad

ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ | 5 ಬಾರಿಯ ಚಾಂಪಿಯನ್ ಜೊಕೊವಿಕ್‌ಗೆ ಆಘಾತಕಾರಿ ಸೋಲು

Update: 2025-03-09 20:55 IST

ಜೊಕೊವಿಕ್‌ | PC : X 

ಕ್ಯಾಲಿಫೋರ್ನಿಯಾ: ವಿಶ್ವದ ಮಾಜಿ ನಂ.1 ಆಟಗಾರ ನೊವಾಕ್ ಜೊಕೊವಿಕ್ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ.

ಐದು ಬಾರಿ ಇಂಡಿಯನ್ ವೆಲ್ಸ್ ಎಟಿಪಿ ಮಾಸ್ಟರ್ಸ್ ಪ್ರಶಸ್ತಿಯನ್ನು ಜಯಿಸಿರುವ ಜೊಕೊವಿಕ್ 6-2, 3-6, 6-1 ಸೆಟ್‌ಗಳ ಅಂತರದಿಂದ ಬೋಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್ ವಿರುದ್ಧ್ದ ಸೋತಿದ್ದಾರೆ.

‘‘ಕಳಪೆ ಪ್ರದರ್ಶನಕ್ಕೆ ಯಾವುದೇ ಕ್ಷಮೆ ಇಲ್ಲ. ನೀವು ಅಂಗಣದಲ್ಲಿ ಈ ರೀತಿ ಆಡುವಾಗ ಉತ್ತಮ ಎನಿಸುವುದಿಲ್ಲ. ಆದರೆ ನನ್ನ ಎದುರಾಳಿಗೆ ಅಭಿನಂದನೆಗಳು’ ಎಂದು 24 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಹೇಳಿದ್ದಾರೆ.

ಕಳೆದ ವರ್ಷ ಜೊಕೊವಿಕ್ ಅವರು ಅಲ್ಕರಾಝ್ ವಿರುದ್ಧ ಜಯ ಸಾಧಿಸಿದ್ದರು. ಆ ನಂತರ ಡೇವಿಸ್ ಕಪ್‌ನಲ್ಲಿ ರಫೆಲ್ ನಡಾಲ್‌ಗೆ ಸೋಲುಣಿಸಿದ್ದರು.

ಜೊಕೊವಿಕ್ ಅವರು ವಿಶ್ವದ ನಂ.2ನೇ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಹಾಗೂ ನಾಲ್ಕನೇ ಶ್ರೇಯಾಂಕದ ಕಾಸ್ಪರ್ ರೂಡ್ ಅವರನ್ನು ಅನುಸರಿಸಿದರು. ಈ ಇಬ್ಬರು ಕೂಡ ಇದೇ ಟೂರ್ನಿಯಲ್ಲಿ ಆಘಾತಕಾರಿ ಸೋಲು ಕಂಡಿದ್ದಾರೆ.

ಹಾಲಿ ಚಾಂಪಿಯನ್ ಅಲ್ಕರಾಝ ಫಾನ್ಸ್ ಆಟಗಾರ ಕ್ವೆನ್‌ಟಿನ್ ಹೇಲ್ಸ್‌ರನ್ನು 6-4, 6-2 ನೇರ ಸೆಟ್‌ಗಳಿಂದ ಮಣಿಸಿ ಸತತ ಮೂರನೇ ಬಾರಿ ಇಂಡಿಯನ್ ವೆಲ್ಸ್ ಟೂರ್ನಿ ಗೆಲ್ಲುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಜೊಕೊವಿಕ್ ಹಾಗೂ ರೋಜರ್ ಫೆಡರರ್ ಮಾತ್ರ ಈ ಸಾಧನೆ ಮಾಡಿದ್ದಾರೆ.

ಇದೇ ವೇಳೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮ್ಯಾಡಿಸನ್ ಕೀಸ್ ರಶ್ಯದ ಅನಸ್ತೇಸಿಯ ಪೊಟಾಪೊವಾರನ್ನು 6-3, 6-0 ಸೆಟ್‌ಗಳಿಂದ ಮಣಿಸಿ ಉತ್ತಮ ಆರಂಭ ಪಡೆದಿದ್ದಾರೆ.

ಅಮೆರಿಕದ ಟೇಲರ್ ಫ್ರಿಟ್ಝ್ ಹಾಗೂ ಕೊಕೊ ಗೌಫ್ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

2022ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದ ಫ್ರಿಟ್ಝ್ ಇಟಲಿಯ ಕ್ವಾಲಿಫೈಯರ್ ಮ್ಯಾಟಿಯೊ ಜಿಗಾಂಟೆ ಅವರನ್ನು 7-5, 6-3 ಸೆಟ್‌ಗಳಿಂದ ಮಣಿಸಿದರೆ, 3ನೇ ಶ್ರೇಯಾಂಕಿತೆ ಗೌಫ್ ಜಪಾನ್ ಆಟಗಾರ್ತಿ ಮೊಯುಕಾ ಉಚಿಜಿಮಾರನ್ನು 6-3, 3-6,7-6(7/4) ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News