Photo Credit ; PTI 

ಹೊಸದಿಲ್ಲಿ, ಅ. 7: ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಆನಂತರ ನಡೆಯುವ ಟೆಸ್ಟ್ ಸರಣಿಗೆ ತಂಡಗಳನ್ನು ಮುಂದಿನ ವಾರ ಪ್ರಕಟಿಸುವ ಸಾಧ್ಯತೆಯಿದೆ.

ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯವು ಆಕ್ಲೆಂಡ್ನಲ್ಲಿ ನವೆಂಬರ್ 4ರಂದು ನಡೆಯಲಿದೆ.

ಈಗ ನಡೆಯುತ್ತಿರುವ ಭಾರತ ಎ ಹಾಗೂ ಆಸ್ಟ್ರೇಲಿಯ ಎ ನಡುವಿನ ಅನಧಿಕೃತ ಏಕದಿನ ಸರಣಿಯಲ್ಲಿ ಕೆಲವು ಆಟಗಾರರ ಪ್ರದರ್ಶನವನ್ನು ಮೌಲ್ಯಮಾಪನ ಮಾಡಲು ಆಯ್ಕೆಗಾರರು ಬಯಸಿದ್ದಾರೆ. ಟೆಸ್ಟ್ ಆಟಗಾರರು ಪೂರ್ವ ತಯಾರಿ ನಡೆಸುವ ಕಾರಣ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಪರ್ಯಾಯ ತಂಡವನ್ನು ಸಜ್ಜುಗೊಳಿಸಲು ಆಯ್ಕೆಗಾರರು ಯೋಜನೆ ರೂಪಿಸಿದ್ದಾರೆ.

ಚತುರ್ದಿನ ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿದ ಬಳಿಕ ಭಾರತ ಎ ತಂಡವು ತನ್ನ ಮೊದಲ 50 ಓವರ್ ಗಳ ಪಂದ್ಯವನ್ನು 125 ರನ್ಗಳಿಂದ ಸೋತಿತ್ತು. ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್, ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಸೂರ್ಯಾಂಶ್ ಶೆಡ್ಗೆ 21ರ ಹರೆಯದ ವೇಗಿ ಮಹ್ಲಿ ಬೀಯರ್ಡ್ಮನ್ ಬೌಲಿಂಗ್ ದಾಳಿಗೆ ತತ್ತರಿಸಿದ್ದರು. ಕೇವಲ ರಜತ್ ಪಾಟಿದಾರ್ (53 ರನ್) ಆಸ್ಟ್ರೇಲಿಯದ ವಿರುದ್ಧ ಒಂದಷ್ಟು ಹೋರಾಟ ನೀಡಿದ್ದರು. 275 ರನ್ ಚೇಸ್ ವೇಳೆ ಭಾರತವು 149 ರನ್‌ ಗೆ ಆಲೌಟಾಗಿತ್ತು.

ಬಿಸಿಸಿಐ ಮಂಗಳವಾರ ಮುಂಬರುವ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಭಾರತದ T20 ತಂಡವನ್ನು ಪ್ರಕಟಿಸಿತ್ತು. ನಾಯಕ ಶ್ರೇಯಸ್ ಅಯ್ಯರ್ ನಾಯಕನಾಗಿ ಮುಂದುವರಿದಿದ್ದು, ಸದ್ಯ ವೆಸ್ಟ್ಇಂಡೀಸ್ ವಿರುದ್ಧ ಸ್ಪರ್ಧಿಸುತ್ತಿರುವ ತಂಡವನ್ನೇ ಆಯ್ಕೆ ಮಾಡಲಾಗಿದೆ. ಭುವನೇಶ್ವರ ಕುಮಾರ್ ನಾಲ್ಕು ವರ್ಷಗಳ ನಂತರ T20 ತಂಡಕ್ಕೆ ವಾಪಸಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor