×
Ad

IPL: ಲಾರಾ ಬದಲಿಗೆ ನೂತನ ಮುಖ್ಯ ಕೋಚ್ ನೇಮಿಸಿದ ಸನ್ ರೈಸರ್ಸ್ ಹೈದರಾಬಾದ್

Update: 2023-08-07 22:47 IST

ಡೇನಿಯಲ್ ವೆಟ್ಟೋರಿ. | Photo: PTI 

ಹೊಸದಿಲ್ಲಿ: ಐಪಿಎಲ್ ತಂಡ ಸನ್ರೈಸರ್ಸ್ ಹೈದರಾಬಾದ್ ವೆಸ್ಟ್ಇಂಡೀಸ್ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಬದಲಿಗೆ ನ್ಯೂಝಿಲ್ಯಾಂಡ್ ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.

ಸನ್ರೈಸರ್ಸ್ ಹೈದರಾಬಾದ್ ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರವನ್ನು ಪ್ರಕಟಿಸಿದೆ.

ಕಳೆದ ವರ್ಷ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳುವ ಮೊದಲು ಲಾರಾ ಅವರು ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು. ಲಾರಾ ಕೋಚಿಂಗ್ ನಲ್ಲಿ 2016ರ ಚಾಂಪಿಯನ್ ಹೈದರಾಬಾದ್ ತಂಡ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಜಯ ಸಾಧಿಸಿ 10 ತಂಡಗಳಿರುವ ಲೀಗ್ ನಲ್ಲಿ ಕೊನೆಯ ಸ್ಥಾನ ಪಡೆದಿದೆ.

ಬ್ರಿಯಾನ್ ಲಾರಾ ಅವರೊಂದಿಗಿನ ನಮ್ಮ ಎರಡು ವರ್ಷಗಳ ಬಾಂಧವ್ಯ ಅಂತ್ಯವಾಗಿದೆ. ನಾವು ಅವರಿಗೆ ವಿದಾಯ ಕೋರುತ್ತಿದ್ದೇವೆ ಎಂದು ಹೈದರಾಬಾದ್ ತಂಡವು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ತಿಳಿಸಿದೆ.

ಆರು ವರ್ಷಗಳಲ್ಲಿ ವೆಟ್ಟೋರಿ ಹೈದರಾಬಾದ್ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲಿರುವ 4ನೇ ಅಭ್ಯರ್ಥಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News