×
Ad

ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಗೆದ್ದ ಜಾನ್ ಪಿಯರ್ಸ್-ಒಲಿವಿಯಾ ಗ್ಯಾಡೆಕಿ

Update: 2025-01-24 21:40 IST

PC : NDTV 

ಮೆಲ್ಬರ್ನ್: ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿರುವ ಆಸ್ಟ್ರೇಲಿಯದ ಜಾನ್ ಪಿಯರ್ಸ್ ಮತ್ತು ಒಲಿವಿಯಾ ಗ್ಯಾಡೆಕಿ ಶುಕ್ರವಾರ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.

ಅವರು ಫೈನಲ್‌ನಲ್ಲಿ ತಮ್ಮ ದೇಶದವರೇ ಆಗಿರುವ ಕಿಂಬರ್ಲಿ ಬಿರೆಲ್ ಮತ್ತು ಜಾನ್-ಪ್ಯಾಟ್ರಿಕ್ ಸ್ಮಿತ್ ಜೋಡಿಯನ್ನು 3-6, 6-4, 10-6 ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.

1967ರ ಆರಂಭಿಕ ಗ್ರ್ಯಾನ್ ಸ್ಲಾಮ್ ಬಳಿಕ, ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಆಸ್ಟ್ರೇಲಿಯದವರೇ ಮುಖಾಮುಖಿಯಾಗಿರುವುದು ಇದೇ ಮೊದಲ ಬಾರಿಯಾಗಿದೆ. ಇದು ಗ್ಯಾಡೆಕಿಯ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾದರೆ, ಪಿಯರ್ಸ್‌ರದ್ದು ಮೂರನೆಯದಾಗಿದೆ. ಪಿಯರ್ಸ್ ಇದಕ್ಕೂ ಮೊದಲು 2017ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಮತ್ತು 2022ರ ಯುಎಸ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News