ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ಜೋರ್ಡಿ ಅಲ್ಬಾ ನಿವೃತ್ತಿ
ಜೋರ್ಡಿ ಅಲ್ಬಾ Photo: twitter/@JordiAlba
ಮ್ಯಾಡ್ರಿಡ್: ಸ್ಪೇನ್ ತಂಡದೊಂದಿಗೆ ಯುರೋಪಿಯನ್ ಚಾಂಪಿಯನ್ ಹಾಗೂ ನೇಶನ್ಸ್ ಲೀಗ್ ವಿನ್ನರ್ ಆಗಿದ್ದ ಜೋರ್ಡಿ ಅಲ್ಬಾ ಶುಕ್ರವಾರ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.
34ರ ಹರೆಯದಲ್ಲಿ ಜೋರ್ಡಿ ಅಲ್ಬಾ ತನ್ನ ಶ್ರೇಷ್ಠ ಅಂತರ್‌ರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ರಾಯಲ್ ಸ್ಪ್ಯಾನಿಶ್ ಫುಟ್ಬಾಲ್ ನಿಂದ ಜೋರ್ಡಿಗೆ ಧನ್ಯವಾದಗಳು ಎಂದು ಸ್ಪ್ಯಾನೀಶ್ ಫುಟ್ಬಾಲ್ ಫೆಡರೇಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
2011ರ ಅಕ್ಟೋಬರ್ 11ರಂದು ತನ್ನ 22ನೇ ವಯಸ್ಸಿನಲ್ಲಿ ಜೋರ್ಡಿ ಸ್ಪೇನ್ ಪರ ಮೊದಲ ಪಂದ್ಯ ಆಡಿದ್ದರು. ಯುರೋಪಿಯನ್ ಚಾಂಪಿಯನ್‌ಶಿಪ್ ಹಾಗೂ ವಿಶ್ವಕಪ್‌ನ್ನು ಜಯಿಸಿದ ನಂತರ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದರು. ಯುರೋ 2012ರ ಫೈನಲ್‌ನಲ್ಲಿ ಇಟಲಿ ವಿರುದ್ಧದ ಫೈನಲ್ ಪಂದ್ಯದಲ್ಲಿ 4 ಗೋಲುಗಳಲ್ಲಿ ಒಂದನ್ನು ಜೋರ್ಡಿ ಗಳಿಸಿದ್ದರು. ತನ್ನ ರಾಷ್ಟ್ರೀಯ ತಂಡದ ಪರ ಮೊದಲ ಪ್ರಶಸ್ತಿ ಜಯಿಸಿದ್ದರು.
ಜೋರ್ಡಿ ತನ್ನ 12 ವರ್ಷಗಳ ಅಂತರ್‌ರಾಷ್ಟ್ರೀಯ ವೃತ್ತಿಜೀವನದಲ್ಲಿ 92 ಪಂದ್ಯಗಳನ್ನು ಆಡಿದ್ದು, 9 ಗೋಲುಗಳನ್ನು ಗಳಿಸಿದ್ದಾರೆ. ಮೂರು ವಿಶ್ವಕಪ್‌ಗಳು, ಮೂರು ಯುರೋಪಿಯನ್ ಚಾಂಪಿಯನ್‌ಶಿಪ್‌ಗಳು , ಲಂಡನ್ ಒಲಿಂಪಿಕ್ ಗೇಮ್ಸ್ ಹಾಗೂ ಕಾನ್ಫಡರೇಶನ್ಸ್ ಕಪ್‌ನಲ್ಲಿ ಸ್ಪೇನ್ ತಂಡವನ್ನು ಪ್ರತಿನಿಧಿಸಿದ್ದರು.