×
Ad

ಕಿವೀಸ್ನ 2ನೇ ಪಂದ್ಯಕ್ಕೂ ಕೇನ್ ವಿಲಿಯಮ್ಸನ್ ಅಲಭ್ಯ

Update: 2023-10-08 23:24 IST

Photo : instagram

ಹೈದರಾಬಾದ್, ಅ. 8: ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋಮವಾರ ನಡೆಯಲಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲೂ ನ್ಯೂಝಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಆಡುವುದಿಲ್ಲ ಎಚಿದು ಕೋಚ್ ಗ್ಯಾರಿ ಸ್ಟೆಡ್ ರವಿವಾರ ಹೇಳಿದ್ದಾರೆ. ಆದರೆ, ಅವರು ವಾರಾಂತ್ಯದಲ್ಲಿ ತಂಡಕ್ಕೆ ಮರಳುವ ನಿರೀಕ್ಷೆ ಇದೆ ಎಂದಿದ್ದಾರೆ.

ಆರು ತಿಂಗಳ ಹಿಂದೆ ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿರುವ ವಿಲಿಯಮ್ಸನ್ ಈಗಲೂ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಕಳೆದ ವಾರ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಅವರು ಭಾಗವಹಿಸಿದ್ದರು.

ಗುರುವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದಲೂ ಅವರು ಹೊರಗುಳಿದಿದ್ದರು. ಆ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಹಾಲಿ ಚಾಂಪಿಯನ್ ತಂಡವನ್ನು ಒಂಭತ್ತು ವಿಕೆಟ್ಗಳಿಂದ ಸೋಲಿಸಿತ್ತು.

ಸೋಮವಾರ ಹೈದರಾಬಾದ್ನಲ್ಲಿ ನಡೆಯಲಿರುವ ಪಂದ್ಯವನ್ನೂ ಅವರು ದೂರದಿಂದಲೇ ವೀಕ್ಷಿಸಲಿದ್ದಾರೆ.

ಆದರೆ, ಶುಕ್ರವಾರ ಚೆನ್ನೈನಲ್ಲಿ ನಡೆಯಲಿರುವ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ವಿಲಿಯಮ್ಸನ್ ಆಡುವ ನಿರೀಕ್ಷೆಯಿದೆ ಎಂದು ಸ್ಟೆಡ್ ಹೇಳಿದರು.

ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಫೀಲ್ಡಿಂಗ್ ಸುಧಾರಿಸಬೇಕಾಗಿದೆ. ತನ್ನ ದೇಹದ ಮೇಲೆ ಅವರು ನಂಬಿಕೆ ಇರಿಸಬೇಕಾಗಿದೆ ಎಚಿದು ಕೋಚ್ ನುಡಿದರು.

ವಿಲಿಯಮ್ಸನ್ ಏಕದಿನದಲ್ಲಿ ಹಾಲಿ ತಂಡದ ಗರಿಷ್ಠ ರನ್ ಗಳಿಕೆದಾರರಾಗಿದ್ದಾರೆ. ಅವರು 6,500ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ್ದು, 13 ಶತಕಗಳನ್ನು ಬಾರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News