ಕೊಹ್ಲಿ, ಗಾಯಕ್ವಾಡ್ ಶತಕ: ದಕ್ಷಿಣ ಆಫ್ರಿಕಾಗೆ 359 ರನ್‌ಗಳ ಗುರಿ ನೀಡಿದ ಭಾರತ
ನಾಯಕ ಕೆ.ಎಲ್.ರಾಹುಲ್ ಸತತ ಎರಡನೆ ಅರ್ಧಶತಕ
Update: 2025-12-03 17:46 IST
ಋತುರಾಜ್ ಗಾಯಕ್ವಾಡ್ , ವಿರಾಟ್ ಕೊಹ್ಲಿ | Photo Credit : PTI
ರಾಯ್ಪುರ್: ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡಕ್ಕೆ ನಿಗದಿತ 50 ಓವರ್‌ಗಳಲ್ಲಿ 359 ರನ್‌ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ, ವಿರಾಟ್ ಕೊಹ್ಲಿ (102), ಋತುರಾಜ್ ಗಾಯಕ್ವಾಡ್ (105) ಹಾಗೂ ನಾಯಕ ಕೆ.ಎಲ್.ರಾಹುಲ್ (ಅಜೇಯ 66) ಅವರ ಸತತ ಎರಡನೆ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 358 ರನ್ ಪೇರಿಸಿದೆ.
ಮತ್ತೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕೆ.ಎಲ್.ರಾಹುಲ್, ಕೇವಲ 43 ಬಾಲ್‌ಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಗಳ ನೆರವಿನಿಂದ ಔಟಾಗದೆ 66 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿ ಅವರಿಗೆ ಒಳ್ಳೆಯ ಸಾಥ್ ನೀಡಿದ ರವೀಂದ್ರ ಜಡೇಜಾ, 27 ಬಾಲ್‌ಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ ಅಜೇಯ 24 ರನ್ ಗಳಿಸಿದರು.