ಆ.13 ರಿಂದ ಬೆಂಗಳೂರಿನಲ್ಲಿ ಮಹಾರಾಜ ಟಿ-20 ಲೀಗ್ ಟ್ರೋಫಿ
Update: 2023-08-10 23:17 IST
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ.13 ರಿಂದ ಆರಂಭಗೊಳ್ಳಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ ಎಸ್ ಸಿಎ) ಆಯೋಜಿಸುವ ಮಹಾರಾಜ ಟಿ-20 ಲೀಗ್ನ ಟ್ರೋಫಿಯನ್ನು ಗುರುವಾರ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಯಿತು.
ಈ ವೇಳೆ ಕ್ರಿಕೆಟಿಗರಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ವೈಶಾಖ್, ಶ್ರೇಯಸ್ ಗೋಪಾಲ್, ಕೆಎಸ್ ಸಿಎ ಅಧ್ಯಕ್ಷ ರಘುರಾಮ್ ಭಟ್, ಉಪಾಧ್ಯಕ್ಷ ಸಂಪತ್ ಕುಮಾರ್, ದಿಗ್ಗಜ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಉಪಸ್ಥಿತರಿದ್ದರು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಪತ್ ಕುಮಾರ್, ಫಿಕ್ಸಿಂಗ್ ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಜ ಟ್ರೋಫಿ ಟೂರ್ನಿ ವೇಳೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳು ಹಾಜರಿರಲಿದ್ದಾರೆ ಎಂದು ಮಾಹಿತಿ ನೀಡಿದರು.