×
Ad

ಭಾರತ ವಿರುದ್ಧ ಟಿ-20 ಸರಣಿಗೆ ಮರಳುವ ವಿಶ್ವಾಸದಲ್ಲಿ ಮ್ಯಾಕ್ಸ್‌ವೆಲ್

Update: 2025-10-09 21:47 IST

ಮ್ಯಾಕ್ಸ್‌ವೆಲ್ | Photo Credit : NDTV

ಮೆಲ್ಬರ್ನ್, ಅ.9: ಬಲ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಸ್ಟ್ರೇಲಿಯದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸರಿಯಾದ ಸಮಯಕ್ಕೆ ಫಿಟ್ನೆಸ್ ಪಡೆದು ಮುಂಬರುವ ಭಾರತ ತಂಡದ ವಿರುದ್ಧ ಟಿ-20 ಅಂತರ್‌ರಾಷ್ಟ್ರೀಯ ಸರಣಿಗೆ ವಾಪಸಾಗುವ ವಿಶ್ವಾಸದಲ್ಲಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಟಿ-20 ಸರಣಿಗಿಂತ ಮೊದಲು ಅಭ್ಯಾಸ ನಡೆಸುತ್ತಿದ್ದಾಗ ಸಹ ಆಟಗಾರ ಮಿಚೆಲ್ ಓವನ್ ಅವರು ಹೊಡೆದ ಚೆಂಡು ಮಣಿಕಟ್ಟಿಗೆ ಅಪ್ಪಳಿಸಿದ ಪರಿಣಾಮ 36ರ ವಯಸ್ಸಿನ ಮ್ಯಾಕ್ಸ್‌ವೆಲ್ ಗಾಯಗೊಂಡಿದ್ದರು.

‘‘ಕಳೆದ ವಾರ ಸರ್ಜರಿಗೆ ಒಳಗಾಗಿರುವ ಹಿನ್ನಲೆಯಲ್ಲಿ ಭಾರತ ಸರಣಿಯಲ್ಲಿ ಸ್ವಲ್ಪ ಭಾಗ ಆಡುವ ಅಲ್ಪ ವಿಶ್ವಾಸದಲ್ಲಿದ್ದೇನೆ. ಸರಣಿಯಿಂದ ಸಂಪೂರ್ಣ ಹೊರಗುಳಿಯಬೇಕು ಇಲ್ಲವೇ ಸರ್ಜರಿಗೆ ಒಳಗಾಗಬೇಕು ಎಂಬ ಆಯ್ಕೆ ನನಗೆ ನೀಡಲಾಗಿತ್ತು’’ಎಂದು ಅಕ್ಟೋಬರ್ 29 ಹಾಗೂ 31ರಂದು ಭಾರತ ವಿರುದ್ಧ್ದ ನಡೆಯಲಿರುವ ಮೊದಲೆರಡು ಟಿ-20 ಪಂದ್ಯಕ್ಕೆ ಆಸ್ಟ್ರೇಲಿಯ ತಂಡದಲ್ಲಿ ಸ್ಥಾನ ಪಡೆಯದ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಮ್ಯಾಕ್ಸ್‌ವೆಲ್ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿ ಟಿ-20 ಇನಿಂಗ್ಸ್ ಆಡಿದ್ದು, ಆಗ 36 ಎಸೆತಗಳಲ್ಲಿ ಔಟಾಗದೆ 62 ರನ್ ಗಳಿಸಿ ಪಂದ್ಯ ಗೆಲುವಿಗೆ ನೆರವಾಗಿದ್ದರು. ಕಳೆದ ತಿಂಗಳು ದೇಶೀಯ ಏಕದಿನ ಟೂರ್ನಿಯಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ ವಿಕ್ಟೋರಿಯ ತಂಡದ ಪರ 82 ಎಸೆತಗಳಲ್ಲಿ 107 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News