×
Ad

ದುಲೀಪ್ ಟ್ರೋಫಿ | ದಕ್ಷಿಣ ವಲಯಕ್ಕೆ ಕಾಸರಗೋಡಿನ ತಳಂಗರದ ಮುಹಮ್ಮದ್ ಅಝರುದ್ದೀನ್ ನಾಯಕ

Update: 2025-08-31 20:45 IST

ಮುಹಮ್ಮದ್ ಅಝರುದ್ದೀನ್ | PC : X 

ಬೆಂಗಳೂರು, ಆ.31: ಕೇರಳದ ಬ್ಯಾಟರ್ ಕಾಸರಗೋಡಿನ ತಳಂಗರದ ಮುಹಮ್ಮದ್ ಅಝರುದ್ದೀನ್ ಉತ್ತರ ವಲಯದ ವಿರುದ್ಧ ಬೆಂಗಳೂರಿನಲ್ಲಿ ಸೆ.4ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ತಿಲಕ್ ವರ್ಮಾ ಬದಲಿಗೆ ದಕ್ಷಿಣ ವಲಯ ತಂಡದ ನಾಯಕತ್ವವಹಿಸಲಿದ್ದಾರೆ.

ದಕ್ಷಿಣ ವಲಯದ ನಾಯಕನಾಗಿ ಈ ಹಿಂದೆ ನೇಮಿಸಲ್ಪಟ್ಟಿದ್ದ ತಿಲಕ್ ಅವರು ಮುಂಬರುವ ಏಶ್ಯ ಕಪ್‌ಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಕಾರಣ ದುಲೀಪ್ ಟ್ರೋಫಿಯಲ್ಲಿ ಆಡುತ್ತಿಲ್ಲ.

ದಕ್ಷಿಣ ವಲಯದ ಉಪ ನಾಯಕನಾಗಿದ್ದ ಅಝರುದ್ದೀನ್‌ರನ್ನು ಇದೀಗ ನಾಯಕನಾಗಿ ಭಡ್ತಿ ನೀಡಲಾಗಿದ್ದು, ತಮಿಳುನಾಡಿನ ಎನ್.ಜಗದೀಶನ್‌ ರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ.

ತಮಿಳುನಾಡಿನ ಎಡಗೈ ಸ್ಪಿನ್ನರ್ ಆರ್. ಸಾಯಿ ಕಿಶೋರ್ ದಕ್ಷಿಣ ವಲಯದ ಪರ ಸೆಮಿ ಫೈನಲ್‌ನಲ್ಲಿ ಆಡುವುದಿಲ್ಲ. ಇತ್ತೀಚೆಗೆ ಬುಚಿ ಬಾಬು ಟ್ರೋಫಿಯಿಂದ ಹೊರಗುಳಿಯಲು ಕಾರಣವಾಗಿದ್ದ ಕೈ ನೋವಿನಿಂದ ಕಿಶೋರ್ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ.

ದುಲೀಪ್ ಟ್ರೋಫಿಯ ಕೊನೆಯ 4 ಪಂದ್ಯಗಳಿಗೆ ಪುದುಚೇರಿಯ ಅಂಕಿತ್ ಶರ್ಮಾ ಹಗೂ ಆಂಧ್ರದ ಶೇಕ್ ರಶೀದ್‌ರನ್ನು ದಕ್ಷಿಣ ವಲಯ ತಂಡಕ್ಕೆ ಸೇರಿಸಲಾಗಿದೆ.

ಎಡಗೈ ಸ್ಪಿನ್ನರ್ ಅಂಕಿತ್ 68 ಪ್ರಥಮ ದರ್ಜೆ ಪಂದ್ಯಗಳಲ್ಲಿ 168 ವಿಕೆಟ್‌ಗಳನ್ನು ಪಡೆದಿದ್ದರೆ, 20ರ ವಯಸ್ಸಿನ ಅಗ್ರ ಸರದಿಯ ಬ್ಯಾಟರ್ ರಶೀದ್ 19 ರಣಜಿ ಟ್ರೋಫಿ ಪಂದ್ಯಗಳಲ್ಲಿ 1,204 ರನ್ ಗಳಿಸಿದ್ದಾರೆ.

*ಪರಿಷ್ಕೃತ ದಕ್ಷಿಣ ವಲಯ ತಂಡ

ಮುಹಮ್ಮದ್ ಅಝರುದ್ದೀನ್(ನಾಯಕ), ತನ್ಮಯ್ ಅಗರ್ವಾಲ್, ದೇವದತ್ತ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಝಾರ್, ನಾರಾಯಣ ಜಗದೀಶನ್, ತ್ರಿಪುರಣ ವಿಜಯ್, ತನ್ಮಯ್ ತ್ಯಾಗರಾಜನ್, ವಿಜಯಕುಮಾರ್, ನಿದೀಶ್ ಎಂ.ಡಿ., ರಿಕಿ ಭುಯ್, ಬಾಸಿಲ್ ಎನ್.ಪಿ., ಗುರ್ಜನೀತ್ ಸಿಂಗ್, ಸ್ನೇಹಲ್ ಕೌಥಂಕರ್, ಅಂಕಿತ್ ಶರ್ಮಾ, ಶೇಕ್ ರಶೀದ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News