×
Ad

ಏಶ್ಯನ್ ಗೇಮ್ಸ್: ಶತಕ ಬಾರಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Update: 2023-10-03 11:50 IST

ಯಶಸ್ವಿ ಜೈಸ್ವಾಲ್‌ (Photo:Twitter)

ಹ್ಯಾಂಗ್ ಝೌ: ಮಂಗಳವಾರ ಹ್ಯಾಂಗ್ ಝೌನ ಪಿಂಗ್ ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಏಶ್ಯನ್ ಗೇಮ್ಸ್ 2023 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಸಿಡಿಸಿದ ಅಮೋಘ ಶತಕದ ಬಲದಿಂದ ಭಾರತ ಗೆಲುವು ಸಾಧಿಸಿದೆ.

ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಹೊರ ಹೊಮ್ಮಿದರು.

ನ್ಯೂಝಿಲೆಂಡ್ ತಂಡದ ವಿರುದ್ಧ ತಮ್ಮ 23 ವರ್ಷ 146 ದಿನಗಳ ವಯಸ್ಸಿನಲ್ಲಿ ಈ ಹಿಂದೆ ಶತಕ ಸಿಡಿಸಿದ್ದ ಶುಭಮನ್ ಗಿಲ್ ಅವರ ಸಾಧನೆಯನ್ನು ಹಿಂದಿಕ್ಕಿದ ಜೈಸ್ವಾಲ್, ತಮ್ಮ 21 ವರ್ಷ 9 ತಿಂಗಳ ಹಾಗೂ 13 ದಿನಗಳ ವಯಸ್ಸಿನಲ್ಲಿ ಆ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟರ್ ಆದರು.

ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ಆರನೆಯ ಬಾರಿ ಆಡುತ್ತಿರುವ ಜೈಸ್ವಾಲ್ ತಮ್ಮ ಚೊಚ್ಚಲ ಶತಕ ಪೂರೈಸಲು ಕೇವಲ 48 ಬಾಲ್ ಗಳನ್ನು ತೆಗೆದುಕೊಂಡರು. ಸೋಮ್ ಪಾಲ್ ಕಾಮಿ ಅವರ 16ನೇ ಓವರ್ ನಲ್ಲಿ ಒಂದು ರನ್ ಓಡುವ ಮೂಲಕ ಅವರು ತಮ್ಮ ಶತಕವನ್ನು ಪೂರೈಸಿದರು.

ಟಿ-20 ಕ್ರಿಕೆಟ್ ಮಾದರಿಯಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ ಹಾಗೂ ಸುರೇಶ್ ರೈನಾರ ನಂತರ ಶತಕ ಗಳಿಸಿದ ಎಂಟನೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಗಿದ್ದಾರೆ.

ತಮ್ಮ ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಶತಕ ಗಳಿಸಿದ ಸಾಧನೆ ಜೈಸ್ವಾಲ್ ಹೆಸರಿನಲ್ಲಿದೆ. ಡೊಮಿನಿಕಾದ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅವರು ಶತಕದ ಸಾಧನೆ ಮಾಡಿದ್ದರು.

ನೇಪಾಳದ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು 20 ಓವರ್ ಗಳಲ್ಲಿ 202 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News