×
Ad

ಕ್ರಿಕೆಟ್ | ಬೌಂಡರಿಯಿಂದ ಹೊರಗೆ ಹಾರಿ ಹಿಡಿಯುವ ಕ್ಯಾಚ್‌ ನಿಯಮದಲ್ಲಿ ಬದಲಾವಣೆ

Update: 2025-06-14 18:02 IST

Screengrab: X/BBL

ದುಬೈ: ಕ್ರಿಕೆಟ್ ಆಟದಲ್ಲಿ ಬೌಂಡರಿಯಿಂದ ಹೊರಗೆ ಹಾರಿ ಹಿಡಿಯುವ ಕ್ಯಾಚ್‌ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಬೌಂಡರಿ ಲೈನ್ನಲ್ಲಿ ಹಿಡಿಯುವ ಕ್ಯಾಚ್ ಅನ್ನು ಮರುರೂಪಿಸಲು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಮಹತ್ವದ ನಿರ್ಧಾರ ಮಾಡಿದೆ. ಕ್ಯಾಚ್‌ಗಳನ್ನು ನಿಯಂತ್ರಿಸುವ ಕಾನೂನಿಗೆ ನಿರ್ಣಾಯಕ ತಿದ್ದುಪಡಿಯನ್ನು ಘೋಷಿಸಿದೆ.

2023 ರ ಬಿಗ್ ಬ್ಯಾಷ್ ಲೀಗ್ (BBL) ಸಮಯದಲ್ಲಿ ಮೈಕೆಲ್ ನೇಸರ್ ‘ಬನ್ನಿ ಹಾಪ್’ ಶೈಲಿಯ ಕ್ಯಾಚನ್ನು ಗುರಿಯಾಗಿಸಿ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಹೊಸ ನಿಯಮಗಳು ಅಕ್ಟೋಬರ್ 2026 ರಲ್ಲಿ ಜಾರಿಗೆ ಬರಲಿದೆ. ಈ ನಿಯಮದ ಪ್ರಕಾರ ಫೀಲ್ಡರ್ ಗಳು ಬೌಂಡರಿ ಲೈನ್ ನಿಂದ ಹೊರಗಡೆ ಚೆಂಡಿನೊಂದಿಗೆ ಬಹು ಸಂಪರ್ಕ ಸಾಧಿಸಿ ಕ್ಯಾಚ್ ಹಿಡಿಯುವುದನ್ನು ನಿಷೇಧಿಸಲಾಗಿದೆ.

ಫೀಲ್ಡರ್‌ಗಳು ಬೌಂಡರಿಯ ಹೊರಗೆ ನೆಲಕ್ಕಿಂತ ಮೇಲೆ ಹಾರಿ ಚೆಂಡಿನೊಂದಿಗೆ ಬಹು ಸಂಪರ್ಕಗಳನ್ನು ಮಾಡುವುದನ್ನು ನಿರ್ಬಂಧಿಸುವ ಎಂಸಿಸಿ ಯ ಅಧಿಕೃತವಾಗಿ ಎಂಸಿಸಿ ಯ ಕಾನೂನುಗಳಲ್ಲಿ ಸ್ಥಾನ ಪಡೆಯುತ್ತದೆ.

ಪರಿಷ್ಕೃತ ನಿಯಮದ ಪ್ರಕಾರ, ಬೌಂಡರಿಯ ಹೊರಗಿನಿಂದ ಜಿಗಿದ ಫೀಲ್ಡರ್‌ಗೆ ಗಾಳಿಯಲ್ಲಿ ಚೆಂಡನ್ನು ಒಮ್ಮೆ ಮಾತ್ರ ಸ್ಪರ್ಶಿಸಲು ಅವಕಾಶವಿದೆ. ಕಾನೂನುಬದ್ಧವಾಗಿ ಕ್ಯಾಚ್ ಅನ್ನು ಪೂರ್ಣಗೊಳಿಸಲು, ಅವರು ನಂತರ ಸಂಪೂರ್ಣವಾಗಿ ಬೌಂಡರಿಯೊಳಗೆ ಇಳಿಯಬೇಕು. ಹಗ್ಗದ ಹೊರಗೆ ಗಾಳಿಯಲ್ಲಿ ಇರುವಾಗ ಮಾಡಿದ ಯಾವುದೇ ಎರಡನೇ ಸಂಪರ್ಕ, ಅಥವಾ ಆ ಸ್ಪರ್ಶದ ನಂತರ ಫೀಲ್ಡರ್ ಹೊರಗೆ ಇಳಿದರೆ, ಅದು ಬೌಂಡರಿ ಎಂದು ಘೋಷಿಸಲಾಗುತ್ತದೆ.

ರಿಲೇ ಕ್ಯಾಚ್‌ಗಳು ಸಹ ಇದರಡಿಯಲ್ಲಿ ಬರುತ್ತವೆ. ಒಬ್ಬ ಫೀಲ್ಡರ್ ಬೌಂಡರಿ ಗೆರೆಯ ಹೊರಗಿನಿಂದ ಚೆಂಡನ್ನು ಮುಟ್ಟಿದರೆ ಅದನ್ನು ತಂಡದ ಸಹ ಆಟಗಾರನಿಗೆ ರವಾನಿಸಲು ಸಹ ನಿಯಮ ಜಾರಿಗೆ ಮಾಡಲಾಗಿದೆ. ಇದರ ಪ್ರಕಾರ ಸಹ ಆಟಗಾರ ಚೆಂಡನ್ನು ಹಿಡಿಯುವ ಮೊದಲು ಮೊದಲು ಸಂಪರ್ಕಕ್ಕೆ ಬಂದ ಆಟಗಾರನೂ ಆಟದ ಮೈದಾನದೊಳಗೆ ಹಿಂತಿರುಗಬೇಕು.

ಜೂನ್ 17 ರಂದು ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಪಂದ್ಯದಿಂದ ಪ್ರಾರಂಭವಾಗುವ ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಭಾಗವಾಗಿ ಐಸಿಸಿ ಈ ಬದಲಾವಣೆಯನ್ನು ತಕ್ಷಣ ಜಾರಿಗೆ ತರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News