×
Ad

ಎಟಿಪಿ ರ‍್ಯಾಂಕಿಂಗ್ ಚರಿತ್ರೆಯಲ್ಲಿ ವಿಶ್ವದ ಹಿರಿಯ ನಂ.1 ಆಟಗಾರ ಎನಿಸಿಕೊಂಡ ನೊವಾಕ್ ಜೊಕೊವಿಕ್

Update: 2024-04-08 20:56 IST

ನೊವಾಕ್ ಜೊಕೊವಿಕ್ | Photo: NDTV 

ಪ್ಯಾರಿಸ್: ಸರ್ಬಿಯದ ಸೂಪರ್ ಸ್ಟಾರ್ ನೊವಾಕ್ ಜೊಕೊವಿಕ್ ಅಧಿಕೃತವಾಗಿ ಎಟಿಪಿ ರ‍್ಯಾಂಕಿಂಗ್ ಇತಿಹಾಸದಲ್ಲಿ ಹಿರಿಯ ವಿಶ್ವದ ನಂ.1 ಆಟಗಾರನಾಗಿದ್ದಾರೆ. ಈ ತನಕ ಜೊಕೊವಿಕ್ ಅವರ ಪ್ರತಿಸ್ಪರ್ಧಿ ರೋಜರ್ ಫೆಡರರ್ ಈ ಸ್ಥಾನಮಾನ ಹೊಂದಿದ್ದರು.

ಮುಕ್ತ ಟೆನಿಸ್ ಯುಗದಲ್ಲಿ 36ರ ವಯಸ್ಸಿನ ಜೊಕೊವಿಕ್ ಅವರು ಖ್ಯಾತ ಟೆನಿಸ್ ಆಟಗಾರನಾಗಿದ್ದು, 24 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಒಡೆಯನಾಗಿದ್ದಾರೆ. ಜೊಕೊವಿಕ್ ಈಗಾಗಲೇ ಹೆಚ್ಚು ವಾರಗಳ ಕಾಲ(419)ಎಟಿಪಿ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಪಡೆದ ಪುರುಷ ಆಟಗಾರ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಫೆಡರರ್(310)ಎರಡನೇ ಸ್ಥಾನದಲ್ಲಿದ್ದಾರೆ.

ಜೊಕೊವಿಕ್ 2011ರ ಜುಲೈ 4ರಂದು ತನ್ನ 24ನೇ ವಯಸ್ಸಿನಲ್ಲಿ ಮೊದಲ ಬಾರಿ ವಿಶ್ವದ ನಂ.1 ಆಟಗಾರನಾಗಿದ್ದರು. ಆದರೆ ಜೊಕೊವಿಕ್ ಅವರ ಇಬ್ಬರು ಪ್ರಬಲ ಎದುರಾಳಿಗಳಾಗಿರುವ ಫೆಡರರ್ ಹಾಗೂ ರಫೆಲ್ ನಡಾಲ್ ತಮ್ಮ 22ನೇ ವಯಸ್ಸಿನಲ್ಲಿ ಮೊದಲ ಬಾರಿ ವಿಶ್ವದ ನಂ.1 ಆಟಗಾರ ಎನಿಸಿಕೊಂಡಿದ್ದರು.

ಜೊಕೊವಿಕ್ ಮುಂದಿನ ವಾರದಿಂದ ಮೊಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯಲ್ಲಿ ಆಡಲಿದ್ದಾರೆ. ಈ ಟೂರ್ನಿಯಲ್ಲಿ ಅವರು ಎರಡು ಬಾರಿ ಚಾಂಪಿಯನ್ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News