ರಾಜ್ಯ ಪಿಕಲ್‌ಬಾಲ್ ಅಸೋಸಿಯೇಶನ್‌ಗೆ ಒಲಿಂಪಿಕ್ಸ್ ಅಸೋಸಿಯೇಶನ್ ಮನ್ನಣೆ: 9 ವರ್ಷಗಳ ಹೋರಾಟಕ್ಕೆ ಸಂದ ಜಯ
ಬೆಂಗಳೂರು, ಡಿ. 1: ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಗೆ ನಾಂದಿ ಹಾಡಿದ ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸೋಸಿಯೇಶನ್ (ಕೆಎಸ್‌ಪಿಎ)ಗೆ ಕೊನೆಗೂ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಶನ್ (ಕೆಒಎ) ಮಾನ್ಯತೆ ನೀಡಿದೆ. ಈ ಮೂಲಕ 2016ರಿಂದ ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಯನ್ನು ಪೋಷಿಸಿದ ಶ್ರಮಕ್ಕೆ ಕೆಎಸ್‌ಪಿಎಗೆ ಗೆಲುವು ಸಿಕ್ಕಂತಾಗಿದೆ.
ಶನಿವಾರ ಕರ್ನಾಟಕ ರಾಜ್ಯ ಪಿಕಲ್ ಬಾಲ್ ಅಸೋಸಿಯೇಶನ್ ಅಧಿಕೃತವಾಗಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್‌ನಿಂದ ಮಾನ್ಯತೆ ಪ್ರಮಾಣಪತ್ರ ಸ್ವೀಕರಿಸಿದೆ. ಇದರೊಂದಿಗೆ ಅದು ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಯ ಏಕೈಕ ಅಧಿಕೃತ ಸಂಸ್ಥೆಯಾಗಿದೆ.
ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಎ.ಜಿ. ಶಿವಕುಮಾರ್ ಮತ್ತು ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ರಜತ್ ಕಂಕರ್ ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ಮತ್ತು ಕಾರ್ಯದರ್ಶಿ ಅನಂತರಾಜು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 2016ರಿಂದಲೂ ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸೋಸಿಯೇಶನ್ ಹಲವು ಜಿಲ್ಲಾ ಮತ್ತು ರಾಜ್ಯ ಮಟ್ಟದ ಟೂರ್ನಿಗಳನ್ನು ಆಯೋಜಿಸಿದೆ. ಅದು ನವೆಂಬರ್ 21ರಿಂದ 24ರವರೆಗೆ ವಿಶ್ವ ಮಟ್ಟದ ಪಿಕಲ್‌ಬಾಲ್ ಚಾಂಪಿಯನ್‌ಶಿಪ್‌ನ್ನು ಯಶಸ್ವಿಯಾಗಿ ನಡೆಸಿದೆ.