ವಿಶ್ವಕಪ್ 2023: ಇಂಗ್ಲೆಂಡ್ ತಂಡದ ಭರ್ಜರಿ ಆರಂಭ
Update: 2023-10-10 12:18 IST
Photo: X/England Cricket
ಧರ್ಮಶಾಲಾ: ವಿಶ್ವಕಪ್ ಕ್ರಿಕೆಟ್ 2023 ಕ್ರೀಡಾಕೂಟದ ಬಾಂಗ್ಲಾದೇಶ ತಂಡದ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಆರಂಭ ಪಡೆದಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿರುವ ಇಂಗ್ಲೆಂಡ್ ತಂಡವು ಇತ್ತೀಚಿನ ವರದಿಗಳ ಪ್ರಕಾರ, 18.2 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ.
ಇಂಗ್ಲೆಂಡ್ ನ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಜಾನಿ ಬೈರ್ ಸ್ಟೋ 52 ಹಾಗೂ ಡೇವಿಡ್ ಮಲನ್ ಅಜೇಯ 61 ಗಳಿಸುವ ಮೂಲಕ ತಮ್ಮ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ, 17.5ನೇ ಓವರ್ ನಲ್ಲಿ ಶಾಕಿಬ್ ಅಲ್ ಹಸನ್ ಬೌಲಿಂಗ್ ನಲ್ಲಿ ಬೈರ್ ಸ್ಟೋ ಬೌಲ್ಡ್ ಆದರು.
ಡೇವಿಡ್ ಮಲನ್ ರೊಂದಿಗೆ ಆಟ ಮುಂದುವರಿಸಿರುವ ಜೋ ರೂಟ್ 4 ರನ್ ಗಳಿಸಿ ಆಟವಾಡುತ್ತಿದ್ದಾರೆ.