×
Ad

ಬುಮ್ರಾ ಮಗುವಿಗೆ ಉಡುಗೊರೆ ನೀಡಿ ಶುಭ ಹಾರೈಸಿದ ಪಾಕ್ ವೇಗಿ ಶಾಹೀನ್ ಅಫ್ರಿದಿ

Update: 2023-09-10 22:27 IST

Photo: Twitter \ @TheRealPCB

ಹೊಸದಿಲ್ಲಿ: ಕೊಲಂಬೊದಲ್ಲಿ ಏಶ್ಯ ಕಪ್ ಸೂಪರ್ -4 ಪಂದ್ಯ ರವಿವಾರ ಭಾರೀ ಮಳೆಯಿಂದಾದ ರದ್ದಾದ ನಂತರ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಬಳಿ ತೆರಳಿ ಮೊದಲ ಮಗುವಿಗೆ ತಂದೆಯಾಗಿರುವುದಕ್ಕೆ ಅಭಿನಂದಿಸಿ ಉಡುಗೊರೆ ನೀಡಿದರು. ಅಫ್ರಿದಿ ಅವರ ಈ ನಡೆಯು ಶ್ಲಾಘನೆಗೆ ಒಳಗಾಗಿದೆ.

ತಂಡದ ಹೋಟೆಲ್ಗೆ ಹಿಂತಿರುಗುವ ಮೊದಲು ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಇಬ್ಬರೂ ಭೇಟಿಯಾದಾಗ ಅಫ್ರಿದಿ ಅವರು ನವಜಾತ ಮಗುವಿಗೆ ಉಡುಗೊರೆಯನ್ನು ಬುಮ್ರಾಗೆ ರವಾನಿಸಿದರು.

ಶಾಹೀನ್ ಅಫ್ರಿದಿ ಕೆಂಪು ಬಣ್ಣದ ಪೆಟ್ಟಿಗೆಯನ್ನು ಗಿಫ್ಟ್ ರೂಪದಲ್ಲಿ ಜಸ್ಪ್ರೀತ್ ಬುಮ್ರಾಗೆ ಹಸ್ತಾಂತರಿಸಿದರು. ಭಾರತದ ಆಟಗಾರನ ನವಜಾತ ಶಿಶುವಿಗೆ ಉತ್ತಮ ಆರೋಗ್ಯ ಹಾಗೂ ಸಂತೋಷಕ್ಕಾಗಿ ಹಾರೈಸಿದರು.

ಜಸ್ಪ್ರೀತ್ ಬುಮ್ರಾ ಅವರು ಅಫ್ರಿದಿ ನೀಡಿದ ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿದರು. ಇದು ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದರು.

ವಿಶ್ವದ ಇಬ್ಬರು ಅತ್ಯುತ್ತಮ ವೇಗಿಗಳ ನಡುವಿನ ಹೃದಯಸ್ಪರ್ಶಿ ವಿನಿಮಯದ ವೀಡಿಯೊವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಹಂಚಿಕೊಂಡಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News