×
Ad

ಪ್ರಜ್ಞಾನಂದ ವಿರುದ್ಧ ಮ್ಯಾಗ್ನಸ್ ಕಾರ್ಲ್ ಸನ್ ಗೆ ಸೋಲು

Update: 2025-07-18 21:29 IST

ಪ್ರಜ್ಞಾನಂದ,  ಮ್ಯಾಗ್ನಸ್ ಕಾರ್ಲ್‌ಸನ್‌ | PC : X 

ಹೊಸದಿಲ್ಲಿ, ಜು.18: ಈ ವರ್ಷ ಆಡಿರುವ ಮತ್ತೊಂದು ಚೆಸ್ ಪಂದ್ಯಾವಳಿಯಲ್ಲಿ ಮತ್ತೊಬ್ಬ ಭಾರತೀಯನ ಕೈಯಲ್ಲಿ ನಾರ್ವೆಯ ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್ ಸನ್ ಸೋಲುಂಡಿದ್ದಾರೆ. ನಾರ್ವೆ ಚೆಸ್ ಟೂರ್ನಿಯಲ್ಲಿ ಕ್ಲಾಸಿಕಲ್ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಗೆ ಎರಡು ಬಾರಿ ಸೋತಿದ್ದ ಕಾರ್ಲ್ ಸನ್ ಈ ತಿಂಗಳಾರಂಭದಲ್ಲಿ ಸೂಪರ್ ಯುನೈಟೆಡ್ ರ‍್ಯಾಪಿಡ್ ಆ್ಯಂಡ್ ಬ್ಲಿಝ್ ಕ್ರೊಯೇಶಿಯಾ ಟೂರ್ನಮೆಂಟ್ ನ ರ‍್ಯಾಪಿಡ್ ಮಾದರಿಯಲ್ಲಿ ಸೋತಿದ್ದರು.

ಗುರುವಾರ ಲಾಸ್ ವೇಗಸ್ ನಲ್ಲಿ ನಡೆದ ಫ್ರೀಸ್ಟೈಲ್ ಚೆಸ್ ಗ್ರ್ಯಾನ್ ಸ್ಲಾಮ್ ಟೂರ್ ನಲ್ಲಿ ಆರ್. ಪ್ರಜ್ಞಾನಂದ ವಿರುದ್ಧ ವಿಶ್ವದ ನಂ.1 ಚೆಸ್ ತಾರೆ ಕಾರ್ಲ್ ಸನ್ ಸೋತಿದ್ದಾರೆ.

‘ಅಪ್ಪರ್ ಬ್ರಾಕೇಟ್’ನಲ್ಲಿ ಪ್ರಶಸ್ತಿಗಾಗಿ ಹೋರಾಡುವ 8 ಆಟಗಾರರನ್ನು ಗ್ರೂಪ್ ಹಂತದ ಹಣಾಹಣಿಯು ನಿರ್ಣಯಿಸಲಿದೆ. ಕಾರ್ಲ್ ಸನ್ ಮೊದಲೆರಡು ಗೇಮ್ ಗಳಲ್ಲಿ ಜಯ ಸಾಧಿಸಿ, ಒಂದರಲ್ಲಿ ಡ್ರಾ ಸಾಧಿಸಿದ್ದರು. ಪ್ರಜ್ಞಾನಂದ ವಿರುದ್ಧದ 4ನೇ ಗೇಮ್ ನಲ್ಲಿ ಸೋಲುಂಡಿದ್ದಾರೆ.

8 ಆಟಗಾರರ ಗ್ರೂಪ್ ನಲ್ಲಿ ಕಾರ್ಲ್ ಸನ್ 5ನೇ ಸ್ಥಾನ ಪಡೆದಿದ್ದಾರೆ. ಹೀಗಾಗಿ ಕಾರ್ಲ್ ಸನ್ ಅವರು ಪ್ರಶಸ್ತಿಗಾಗಿ ಆಡುವ ಸಾಧ್ಯತೆ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News