×
Ad

ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 3ನೇ ವೇಗದ ದ್ವಿಶತಕ ಸಿಡಿಸಿ ಇತಿಹಾಸ ನಿರ್ಮಿಸಿದ ಪೃಥ್ವಿ ಶಾ

Update: 2025-10-27 22:22 IST

ಪೃಥ್ವಿ ಶಾ | Photo Credit : PTI

ಹೊಸದಿಲ್ಲಿ, ಅ.27: ಮಹಾರಾಷ್ಟ್ರ ತಂಡದ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಚಂಡಿಗಡ ತಂಡದ ವಿರುದ್ಧ ಸೋಮವಾರ ನಡೆದ ರಣಜಿ ಟ್ರೋಫಿಯ 2ನೇ ಸುತ್ತಿನ ಪಂದ್ಯದ ವೇಳೆ 3ನೇ ವೇಗದ ದ್ವಿಶತಕ (222 ರನ್, 156 ಎಸೆತ, 29 ಬೌಂಡರಿ, 5 ಸಿಕ್ಸರ್)ದಾಖಲಿಸಿ ಹೊಸ ದಾಖಲೆ ನಿರ್ಮಿಸಿದರು.

ಮಹಾರಾಷ್ಟ್ರದ 2ನೇ ಇನಿಂಗ್ಸ್ ವೇಳೆ 25ರ ವಯಸ್ಸಿನ ಶಾ ಅವರು ಕೇವಲ 141 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 3ನೇ ವೇಗದ ದ್ವಿಶತಕ ಗಳಿಸಿದ ಭಾರತದ 3ನೇ ಬ್ಯಾಟರ್ ಎನಿಸಿಕೊಂಡರು. 91 ವರ್ಷಗಳ ರಣಜಿ ಇತಿಹಾಸದಲ್ಲಿ ರವಿ ಶಾಸ್ತ್ರಿ(1985ರಲ್ಲಿ ಬರೋಡಾದ ವಿರುದ್ಧ 123 ಎಸೆತ)ವೇಗದ ದ್ವಿಶತಕ ದಾಖಲಿಸಿದ್ದರು. ತನ್ಮಯ್ ಅಗರ್ವಾಲ್(2024ರಲ್ಲಿ ಅರುಣಾಚಲ ಪ್ರದೇಶ ವಿರುದ್ದ 119 ಎಸೆತ)ಈ ಸಾಧನೆ ಮಾಡಿದ್ದ ಇನ್ನೋರ್ವ ಭಾರತದ ಆಟಗಾರರಾಗಿದ್ದಾರೆ.

ಶಾ ಅವರು ವೀರೇಂದ್ರ ಸೆಹ್ವಾಗ್ ನಂತರ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 200 ಎಸೆತದೊಳಗೆ ಒಂದಕ್ಕಿಂತ ಹೆಚ್ಚು ದ್ವಿಶತಕ ಗಳಿಸಿದ ಭಾರತದ 2ನೇ ಬ್ಯಾಟರ್ ಎನಿಸಿಕೊಂಡರು. ಶಾ 2019-20ರಲ್ಲಿ ವಡೋದರದಲ್ಲಿ ಬರೋಡಾದ ವಿರುದ್ದ 174 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದು, ಇದೀಗ ತನ್ನದೇ ದಾಖಲೆ ಮುರಿದಿದ್ದಾರೆ. ವೀರೇಂದ್ರ ಸೆಹ್ವಾಗ್ 3 ಬಾರಿ 200 ಎಸೆತದೊಳಗೆ ದ್ವಿಶತಕ ಗಳಿಸಿ ಗ್ರೇಮ್ ಹಿಕ್‌ ರೊಂದಿಗೆ ವಿಶ್ವ ದಾಖಲೆ ಹಂಚಿಕೊಂಡಿದ್ದಾರೆ.

ವಿಶ್ವಮಟ್ಟದಲ್ಲಿ ಕೇವಲ 8 ಆಟಗಾರರು 200ಕ್ಕಿಂತ ಕಡಿಮೆ ಎಸೆತಗಳಲ್ಲಿ ಹಲವು ಬಾರಿ ದ್ವಿಶತಕ ದಾಖಲಿಸಿದ್ದಾರೆ. ರವಿ ಶಾಸ್ತ್ರಿ, ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಸಚಿನ್ ತೆಂಡುಲ್ಕರ್, ಸರ್ಫರಾಝ್ ಖಾನ್ ಹಾಗೂ ಶ್ರೇಯಸ್ ಅಯ್ಯರ್ ಸಹಿತ ಇತರ 20 ಭಾರತೀಯ ಆಟಗಾರರು ಎಸೆತಕ್ಕೊಂದು ರನ್‌ನಂತೆ ದ್ವಿಶತಕ ದಾಖಲಿಸಿದ್ದರು.

ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ ನಲ್ಲಿ 3 ಬಾರಿ ಈ ಸಾಧನೆ ಮಾಡಿದ್ದರು. ಈ ದಾಖಲೆಯನ್ನು ಭಾರತದ ಇತರ ಆಟಗಾರರೊಂದಿಗೆ ಹೋಲಿಸಲು ಸಾಧ್ಯವಿಲ್ಲ.

ಮಹಾರಾಷ್ಟ್ರದ ಪರ ಶಾ ಗಳಿಸಿದ ಮೊದಲ ರಣಜಿ ಶತಕ ಇದಾಗಿದೆ. ಶಾ ಕೇವಲ 72 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ತನ್ನ 14ನೇ ಪ್ರಥಮ ದರ್ಜೆ ಶತಕ ಗಳಿಸಿದರು. ಕೇರಳ ವಿರುದ್ಧ ಆಡಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಶಾ ಅವರು 2ನೇ ಇನಿಂಗ್ಸ್‌ ನಲ್ಲಿ 75 ರನ್ ಗಳಿಸಿದ್ದರು.

25ರ ಹರೆಯದ ಶಾ ಈ ವರ್ಷದ ದೇಶೀಯ ಋತು ಆರಂಭಕ್ಕೆ ಮೊದಲು ಮುಂಬೈ ತೊರೆದು ಮಹಾರಾಷ್ಟ್ರ ತಂಡವನ್ನು ಸೇರಿದ್ದರು.

*ರಣಜಿ ಟ್ರೋಫಿ ಎಲೈಟ್ ಗ್ರೂಪ್ ಪಂದ್ಯಗಳಲ್ಲಿ ವೇಗದ ದ್ವಿಶತಕಗಳು

-ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 1984/85ರಲ್ಲಿ ಬರೋಡಾದ ವಿರುದ್ಧ ಮುಂಬೈ ಪರ ರವಿ ಶಾಸ್ತ್ರಿ(123 ಎಸೆತ)

-ಚಂಡೀಗಡದಲ್ಲಿ ಚಂಡೀಗಡದ ವಿರುದ್ಧ 2025-26ರಲ್ಲಿ ಪ್ರಥ್ವಿ ಶಾ(141 ಎಸೆತ)

-1991-92ರಲ್ಲಿ ರಾಂಚಿಯಲ್ಲಿ ಅಸ್ಸಾಂ ವಿರುದ್ಧ ಬಿಹಾರದ ಪರ ರಾಜೇಶ್ ಬೋರಾ(156 ಎಸೆತ)

-2019-20ರಲ್ಲಿ ವಡೋದರದಲ್ಲಿ ಬರೋಡಾದ ವಿರುದ್ಧ ಮುಂಬೈ ಪರ ಪೃಥ್ವಿ ಶಾ(174 ಎಸೆತ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News