ಕರ್ನಾಟಕ ಅಂಡರ್-19 ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ನಾಯಕ
ಅನ್ವಯ್ ದ್ರಾವಿಡ್ , ರಾಹುಲ್ ದ್ರಾವಿಡ್ |Photo Credit : timesofindia.indiatimes.com
ಬೆಂಗಳೂರು, ಅ.7: ಮುಂಬರುವ ವಿನೂ ಮಂಕಡ್ ಟ್ರೋಫಿಗಾಗಿ ನಡೆಯಲಿರುವ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್‌ರನ್ನು ಕರ್ನಾಟಕ ಅಂಡರ್-19 ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
ವಿನೂ ಮಂಕಡ್ ಟ್ರೋಫಿ ಟೂರ್ನಿಯು ಅಕ್ಟೋಬರ್ 9ರಿಂದ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆಯಲಿದೆ.
ಇದೇ ವೇಳೆ ಭಾರತದ ಬ್ಯಾಟರ್ ಕರುಣ್ ನಾಯರ್ ಎರಡು ವರ್ಷಗಳ ವಿರಾಮದ ನಂತರ ತವರು ತಂಡ ಕರ್ನಾಟಕಕ್ಕೆ ವಾಪಸಾಗಿದ್ದಾರೆ. ಸೌರಾಷ್ಟ್ರದ ವಿರುದ್ಧ ರಾಜ್‌ಕೋಟ್‌ನಲ್ಲಿ ಅ.15ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ನಾಯರ್ ಸ್ಥಾನ ಪಡೆದಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಪುನರಾಗಮನ ಮಾಡಲು ಇದು ಮತ್ತೊಂದು ಅವಕಾಶ ಕಲ್ಪಿಸಬಹುದು.
ವಿನೂ ಮಂಕಡ್ ಟ್ರೋಫಿಗೆ ಕರ್ನಾಟಕ ತಂಡ: ಅನ್ವಯ್ ದ್ರಾವಿಡ್(ನಾಯಕ, ವಿಕೆಟ್‌ಕೀಪರ್), ನಿತೀಶ್ ಆರ್ಯ, ಆದರ್ಶ್ ಡಿ. ಅರಸ್, ಎಸ್.ಮಣಿಕಂಠ(ಉಪ-ನಾಯಕ), ಪ್ರಣೀತ್ ಶೆಟ್ಟಿ, ವಾಸವ್ ವೆಂಕಟೇಶ್, ಅಕ್ಷತ್ ಪ್ರಭಾಕರ್, ಸಿ. ವೈಭವ್, ಕುಲದೀಪ ಸಿಂಗ್, ರತನ್ ಬಿ.ಆರ್., ವೈಭವ್ ಶರ್ಮಾ, ಕೆ.ಎ.ತೇಜಸ್, ಅಥರ್ವ ಮಾಳವಿಯಾ, ಸನ್ನಿ ಕಂಚಿ, ರೆಹಾನ್ ಮುಹಮ್ಮದ್ ವಿಕೆಟ್‌ಕೀಪರ್).