ಭಾರತದ 91ನೇ ಗ್ರ್ಯಾಂಡ್ ಮಾಸ್ಟರ್ ರಾಹುಲ್ ವಿ.ಎಸ್.
ರಾಹುಲ್ ವಿ.ಎಸ್. | PC : NDTV
ಹೊಸದಿಲ್ಲಿ, ನ.8: ಭಾರತೀಯ ಚೆಸ್ ಆಟಗಾರ ರಾಹುಲ್ ವಿ.ಎಸ್. ಆರನೇ ಆವೃತ್ತಿಯ ಆಸಿಯಾನ್ ವೈಯಕ್ತಿಕ ಚಾಂಪಿಯನ್ ಶಿಪ್ ಅನ್ನು ಒಂದು ಸುತ್ತು ಬಾಕಿ ಇರುವಾಗಲೇ ಗೆದ್ದ ನಂತರ ದೇಶದ 91ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದರು.
ಏಶ್ಯನ್ ಜೂನಿಯರ್ ಚಾಂಪಿಯನ್ ಕೂಡ ಆಗಿರುವ 21ರ ವಯಸ್ಸಿನ ರಾಹುಲ್ 2021ರಲ್ಲಿ ಅಂತರರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಜಯಿಸಿದ್ದರು. ಲೈವ್ ರೇಟಿಂಗ್ ಗಳಲ್ಲಿ 2,400 ಅಂಕಗಳನ್ನು ದಾಟುವ ಮೊದಲು ತಮ್ಮ ನಾಲ್ಕನೇ ಹಾಗೂ ಐದನೇ ಐಎಂ ಮಾನದಂಡಗಳನ್ನು ಪಡೆದುಕೊಂಡಿದ್ದಾರೆ.
‘‘ಇನ್ನೂ ಒಂದು ಸುತ್ತು ಬಾಕಿ ಇರುವಾಗಲೇ ಆಸಿಯಾನ್ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದಿದ್ದಕ್ಕಾಗಿ ಹಾಗೂ ಈ ವೇಳೆ ರಾಷ್ಟ್ರದ 91ನೇ ಗ್ರ್ಯಾಂಡ್ ಮಾಸ್ಟರ್ ಆಗಿದ್ದಕ್ಕಾಗಿ ರಾಹುಲ್ ವಿ.ಎಸ್. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.ಭಾರತವನ್ನು ಹೆಮ್ಮೆಪಡಿಸುವಲ್ಲಿ ನೀವು ಇನ್ನಷ್ಟು ಮೈಲಿಗಲ್ಲನ್ನು ತಲುಪಿ ಯಶಸ್ಸನ್ನು ಸಾಧಿಸಿ ಎಂದು ಹಾರೈಸುತ್ತೇನೆ’’ ಎಂದು ಅಖಿಲ ಭಾರತ ಚೆಸ್ ಒಕ್ಕೂಟದ ಅಧ್ಯಕ್ಷ ನಿತಿನ್ ಸಾರಂಗ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.