×
Ad

ಶ್ರೀಲಂಕಾ ವಿರುದ್ಧ ಏಶ್ಯಕಪ್ ಸೂಪರ್-4 ಪಂದ್ಯಕ್ಕೆ ಮಳೆ ಅಡ್ಡಿ: ಭಾರತ 197/9

Update: 2023-09-12 18:57 IST

Photo: Twiter@sportstar

ಕೊಲಂಬೊ, ಸೆ.12: ಶ್ರೀಲಂಕಾದ ಯುವ ಬೌಲರ್ ದುನಿತ್ ವೆಲ್ಲಲಾಗೆ ಸ್ಪಿನ್ ಮೋಡಿಗೆ ತತ್ತರಿಸಿದ ಭಾರತವು ಏಶ್ಯಕಪ್‌ನ ಸೂಪರ್-4 ಪಂದ್ಯವು ಮಳೆಯಿಂದಾಗಿ ನಿಂತಾಗ 47 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 197 ರನ್ ಗಳಿಸಿದೆ.

ಮಂಗಳವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್ ಶರ್ಮಾ(53 ರನ್, 48 ಎಸೆತ) ಹಾಗೂ ಶುಭಮನ್ ಗಿಲ್ (19 ರನ್, 25 ಎಸೆತ) ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 80 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.

ಆಗ ದಾಳಿಗಿಳಿದ 20ರ ಹರೆಯದ ದುನಿತ್ ತನ್ನ ಮೊದಲ ಎಸೆತದಲ್ಲೇ ಶುಭಮನ್ ಗಿಲ್ ವಿಕೆಟನ್ನು ಉರುಳಿಸಿ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು. ವಿರಾಟ್ ಕೊಹ್ಲಿ (3 ರನ್) ಹಾಗೂ ರೋಹಿತ್ ಶರ್ಮಾರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆನಂತರ ಕೆ.ಎಲ್.ರಾಹುಲ್ (39 ರನ್) ಹಾಗೂ ಹಾರ್ದಿಕ್ ಪಾಂಡ್ಯ (5 ರನ್) ವಿಕೆಟನ್ನು ಪಡೆದು ತನ್ನ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದರು.

ದುನಿತ್‌ಗೆ ಇನ್ನೋರ್ವ ಸ್ಪಿನ್ನರ್ ಚರಿತ್ ಅಸಲಂಕ(4-18)ಸಾಥ್ ನೀಡಿದರು. ಇಶಾನ್ ಕಿಶನ್ 33 ರನ್ ಗಳಿಸಿ ಅಸಲಂಕಗೆ ವಿಕೆಟ್ ಒಪ್ಪಿಸಿದರು.

ಮಳೆಯಿಂದಾಗಿ ಪಂದ್ಯ ನಿಂತಾಗ ಅಕ್ಷರ್ ಪಟೇಲ್(15 ರನ್) ಹಾಗೂ ಮುಹಮ್ಮದ್ ಸಿರಾಜ್(ಔಟಾಗದೆ 2) ಕ್ರೀಸ್‌ನಲ್ಲಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News