×
Ad

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಸಾಯಿ ಸುದರ್ಶನ್‍ರನ್ನು ಆರಿಸುವಂತೆ ರವಿ ಶಾಸ್ತ್ರಿ ಒತ್ತಾಯ

Update: 2025-05-02 22:54 IST

ರವಿ ಶಾಸ್ತ್ರಿ | PC : NDTV 

ಮುಂಬೈ: ಸಾಯಿ ಸುದರ್ಶನ್ ಎಲ್ಲಾ ಮಾದರಿಗಳ ಬ್ಯಾಟರ್ ಆಗಿದ್ದು, ಮುಂದೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆಯುವ ಅರ್ಹತೆಯನ್ನು ಹೊಂದಿದ್ದಾರೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಪ್ರಧಾನ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಇಂಗ್ಲೆಂಡ್‍ನಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡುವುದರೊಂದಿಗೆ ಹೊಸ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಚಕ್ರ (2025-2027)ವನ್ನು ಆರಂಭಿಸಲಿದೆ.

ಭಾರತವು ಸ್ವದೇಶದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಹಾಗೂ ಬಳಿಕ ಆಸ್ಟ್ರೇಲಿಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯನ್ನು 1-3 ಅಂತರದಿಂದ ಸೋತಿರುವುದನ್ನು ಸ್ಮರಿಸಬಹುದಾಗಿದೆ. ಈಗ ಎಲ್ಲರ ಗಮನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತೀಯ ತಂಡದ ಆಯ್ಕೆಯ ಮೇಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡುತ್ತಿರುವ ಸಾಯಿ ಸುದರ್ಶನ್ ಹಾಲಿ ಋತುವಿನಲ್ಲಿ ಈವರೆಗೆ 456 ರನ್‍ಗಳನ್ನು ಗಳಿಸಿದ್ದಾರೆ. ಅವರು ಈಗ ಅತ್ಯಧಿಕ ಐಪಿಎಲ್ ರನ್ ಗಳಿಕೆದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಸುದರ್ಶನ್ ಎಡಗೈ ಬ್ಯಾಟರ್ ಆಗಿದ್ದು, ಅವರ ತಂತ್ರಗಾರಿಕೆ ಮತ್ತು ಕೌಂಟಿ ಅನುಭವವನ್ನು ಗಣನೆಗೆ ತೆಗೆದುಕೊಂಡರೆ ಇಂಗ್ಲಿಷ್ ಪರಿಸರದಲ್ಲಿ ಅವರು ಉತ್ತಮ ನಿರ್ವಹಣೆ ನೀಡಲಿದ್ದಾರೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News