×
Ad

ಎಂಟು ಆಟಗಾರರರನ್ನು ಕೈಬಿಟ್ಟ ಆರ್‌ಸಿಬಿ; ರಿಟೈನ್ ಪಟ್ಟಿಯಲ್ಲಿ ಉಳಿದಿದ್ದು ಯಾರು?

Update: 2025-11-15 18:10 IST

Photo Credit : @RCBTweets

ಬೆಂಗಳೂರು: ಹಾಲಿ ಐಪಿಎಲ್‌ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮಿನಿ ಹರಾಜಿಗೆ ಮುನ್ನ ತನ್ನ ರಿಟೆನ್‌–ರಿಲೀಸ್‌ ಪಟ್ಟಿಯನ್ನು ಪ್ರಕಟಿಸಿದೆ. ತಂಡದ ಹಲವು ಪ್ರಮುಖ ಆಟಗಾರರನ್ನು ಆರ್‌ಸಿಬಿ ಈ ಬಾರಿ ಉಳಿಸಿಕೊಂಡಿದ್ದು, ಒಟ್ಟು ಎಂಟು ಆಟಗಾರರನ್ನು ಬಿಡುಗಡೆ ಮಾಡಿದೆ.

ಕಳೆದ ಸೀಸನ್‌ನಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಕೈಬಿಟ್ಟಿರುವುದು ಗಮನಾರ್ಹ. ಬದಲಿ ಆಟಗಾರನಾಗಿ ಇದ್ದ ಮಯಾಂಕ್‌ ಅಗರ್ವಾಲ್‌ ಅವರನ್ನು ಸಹ ಆರ್‌ಸಿಬಿ ರಿಲೀಸ್‌ ಮಾಡಿದೆ. ಯುವ ಆಟಗಾರ ಸ್ವಸ್ತಿಕ್‌ ಚಿಕಾರಾ ಸೇರಿದಂತೆ ಟಿಮ್‌ ಸೀಫರ್ಟ್‌, ಮನೋಜ್‌ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸಿಂಗ್‌ ಮುಜರಾಬಾನಿ ಹಾಗೂ ಮೋಹಿತ್‌ ರಾಠಿ ರಿಲೀಸ್ ಪಟ್ಟಿಯಲ್ಲಿ ಇದ್ದಾರೆ.

ರಜತ್‌ ಪಾಟಿದಾರ್‌, ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌, ಫಿಲ್‌ ಸಾಲ್ಟ್‌, ಜಿತೇಶ್‌ ಶರ್ಮಾ, ಕೃನಾಲ್‌ ಪಾಂಡ್ಯ, ಸ್ವಪ್ನಿಲ್‌ ಸಿಂಗ್‌, ಟಿಮ್‌ ಡೇವಿಡ್‌, ರೊಮಾರಿಯೋ ಶೆಫರ್ಡ್‌, ಜಾಕೋಬ್‌ ಬೆಥೆಲ್‌, ಜೋಶ್‌ ಹೇಝಲ್‌ವುಡ್‌, ಯಶ್‌ ದಯಾಲ್‌, ಭುವನೇಶ್ವರ್‌ ಕುಮಾರ್‌, ನುವಾನ್‌ ತುಷಾರ, ರಸಿಖ್‌ ಸಲಾಮ್‌, ಅಭಿನಂದನ್‌ ಸಿಂಗ್‌, ಸುಯಾಶ್‌ ಶರ್ಮ ಅವರು ಆರ್ ಸಿ ಬಿ ಯಲ್ಲಿಯೇ ಮುಂದುವರೆಯಲಿದ್ದಾರೆ.

ಹರಾಜಿಗೆ ಮುನ್ನ ಆರ್‌ಸಿಬಿ ಬಳಿ 16.4 ಕೋಟಿ ರೂ. ಉಳಿದಿದ್ದು, ತಂಡ ಬಲಪಡಿಸುವತ್ತ ಮತ್ತೆ ಯಾರನ್ನು ಖರೀದಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News