×
Ad

ಮೂರನೇ ಸುತ್ತಿಗೆ ತಲುಪಿದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್

Update: 2023-09-03 22:51 IST

ಬೋಪಣ್ಣ-ಎಬ್ಡೆನ್ Photo: twitter/Sports_India123

ನ್ಯೂಯಾರ್ಕ್ : ಭಾರತದ ರೋಹನ್ ಬೋಪಣ್ಣ ಅವರು ತಮ್ಮ ಆಸ್ಟ್ರೇಲಿಯದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ರೊಂದಿಗೆ ಯು.ಎಸ್. ಓಪನ್ನಲ್ಲಿ ಪುರುಷರ ಡಬಲ್ಸ್ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ.

ಆರನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಝಕ್ಸ್ತಾನದ ಆ್ಯಂಡ್ರೆ ಗೊಲುಬೆವ್ ಹಾಗೂ ರಶ್ಯದ ರೋಮನ್ ಸಫಿಯುಲಿನ್ರನ್ನು 6-3, 6-3 ನೇರ ಸೆಟ್ಗಳ ಅಂತರದಿಂದ ಮಣಿಸಿದೆ.

ಬೋಪಣ್ಣ -ಎಬ್ಡೆನ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಬ್ರಿಟನ್ನ ಶ್ರೇಯಾಂಕರಹಿತ ಜೋಡಿ ಹೆನ್ರಿ ಪ್ಯಾಟೆನ್ ಹಗೂ ಜುಲಿಯನ್ ಕ್ಯಾಶ್ರನ್ನು ಎದುರಿಸಲಿದ್ದಾರೆ.

3ನೇ ಸುತ್ತಿಗೆ ತಲುಪಿರುವ ಬೋಪಣ್ಣ-ಎಬ್ಡೆನ್ ಕನಿಷ್ಠ 58,000 ಡಾಲರ್ ಬಹುಮಾನವನ್ನು ಖಚಿತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News