ಎರಡನೇ ಟಿ-20: ಝಿಂಬಾಬ್ವೆ ವಿರುದ್ಧ ಭಾರತದ ಮಹಿಳಾ ತಂಡಕ್ಕೆ ಸುಲಭ ಜಯ
Photo Credit: BCCIWomen/X
ರಾಯ್ಪುರ, ಅ. 18: ಎರಡನೇ ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಝಿಂಬಾಬ್ವೆ ಮಹಿಳಾ ತಂಡದ ವಿರುದ್ಧ ಭಾರತ ತಂಡ 9 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ.
ರವಿವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಝಿಂಬಾಬ್ವೆ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 102 ರನ್ ಗಳಿಸಿತು. ಚಿಪೊ ಮುಗೇರಿ-ಟಿರಿಪಾನೊ (34 ರನ್, 32 ಎಸೆತ) ಸರ್ವಾಧಿಕ ರನ್ ಗಳಿಸಿದರು. ಭಾರತದ ಪರ ನಿಕಿ ಪ್ರಸಾದ್ (2–7) ಯಶಸ್ವಿ ಪ್ರದರ್ಶನ ನೀಡಿದರು.
ಗೆಲ್ಲಲು ಸುಲಭ ಗುರಿ ಪಡೆದ ಭಾರತ ತಂಡವು 8.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (55 ರನ್, 25 ಎಸೆತ) ಹಾಗೂ ನಾಯಕಿ ಸ್ಮೃತಿ ಮಂಧಾನ (ಔಟಾಗದೆ 47, 25 ಎಸೆತ) ಗೆಲುವಿಗೆ ನೆರವಾದರು.