×
Ad

ಮತ್ತೊಮ್ಮೆ ಟಾಸ್ ಸೋತ ಶುಭಮನ್ ಗಿಲ್

Update: 2025-07-23 21:14 IST

ಶುಭಮನ್ ಗಿಲ್ | PC : X  

ಮ್ಯಾಂಚೆಸ್ಟರ್, ಜು.23: ಟಾಸ್ ಗೆಲ್ಲುವ ವಿಚಾರದಲ್ಲಿ ಭಾರತದ ಅದೃಷ್ಟ ಮತ್ತೊಮ್ಮೆ ಕೈಕೊಟ್ಟಿದೆ. ಬುಧವಾರ ಭಾರತ ತಂಡದ ಟೆಸ್ಟ್ ನಾಯಕ ಶುಭಮನ್ ಗಿಲ್ ಸರಣಿಯಲ್ಲಿ ಸತತ 4ನೇ ಬಾರಿ ಟಾಸ್ ಸೋತಿದ್ದಾರೆ.

ಭಾರತ ತಂಡವು ಜನವರಿಯಲ್ಲಿ ರಾಜ್‌ ಕೋಟ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಕೊನೆಯ ಬಾರಿ ಟಾಸ್ ಜಯಿಸಿತ್ತು. ಆ ನಂತರ ಎಲ್ಲ ಮಾದರಿಯ ಕ್ರಿಕೆಟ್‌ ನಲ್ಲಿ ಸತತ 14 ಬಾರಿ ಟಾಸ್ ಸೋತಿದೆ.

‘‘ನಾವು ಟಾಸ್ ಸೋತಿದ್ದು ಒಳ್ಳೆಯದ್ದಾಗಿದೆ. ವಾತಾವರಣವು ಬ್ಯಾಟಿಂಗ್‌ ಗೆ ಫೇವರ್ ಆಗಿರುವ ನಿರೀಕ್ಷೆ ಇದೆ. ನಾನು ನಿಜವಾಗಿಯೂ ಗೊಂದಲದಲ್ಲಿದ್ದೆ. ನಾವು ಹಿಂದಿನ 3 ಪಂದ್ಯಗಳಲ್ಲಿ ಆಡಿದ ರೀತಿಯು ಅತ್ಯುತ್ತಮವಾಗಿತ್ತು. ನಾನು ನಿರ್ಣಾಯಕ ಹಂತದಲ್ಲಿ ಪಂದ್ಯವನ್ನು ಸೋತಿದ್ದೇವೆ. ನಾವು ಹೆಚ್ಚಿನ ಅವಧಿಯಲ್ಲಿ ಮೇಲುಗೈ ಪಡೆದಿದ್ದೇವೆ. ನಮಗೆ ವಿರಾಮದ ಅಗತ್ಯವಿತ್ತು. ಎಲ್ಲ 3 ಟೆಸ್ಟ್ ಪಂದ್ಯಗಳು ಪೈಪೋಟಿಯಿಂದ ಕೂಡಿತ್ತು’’ಎಂದು ಗಿಲ್ ಹೇಳಿದ್ದಾರೆ.

ಆಡುವ 11ರ ಬಳಗದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದೆ ಎಂದು ಗಿಲ್ ದೃಢಪಡಿಸಿದರು. ಸಾಯಿ ಸುದರ್ಶನ್, ಅಂಶುಲ್ ಕಾಂಬೋಜ್ ಹಾಗೂ ಶಾರ್ದುಲ್ ಠಾಕೂರ್ ಅವರು ಕರುಣ್, ಆಕಾಶ್ ದೀಪ್ ಹಾಗೂ ನಿತೀಶ್ ರೆಡ್ಡಿ ಬದಲಿಗೆ ಆಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News