×
Ad

ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ | ಸಾತ್ವಿಕ್-ಚಿರಾಗ್ ಜೋಡಿ ಸೆಮಿಫೈನಲ್‌ ಗೆ

Update: 2025-05-30 21:40 IST

ಸಾತ್ವಿಕ್-ಚಿರಾಗ್ | PC : ANI 

ಸಿಂಗಾಪುರ: ವಿಶ್ವದ ನಂಬರ್ ವನ್ ಜೋಡಿ ಮಲೇಶ್ಯದ ಗೋ ಸೀ ಫೇ ಮತ್ತು ನೂರ್ ಇಝುದ್ದೀನ್‌ ರನ್ನು ಸೋಲಿಸುವ ಮೂಲಕ ಭಾರತೀಯ ಪುರುಷ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಶುಕ್ರವಾರ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ದೈಹಿಕ ಕ್ಷಮತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದ ಬಳಿಕ ಸ್ಪರ್ಧೆಗೆ ವಾಪಸಾಗಿರುವ ಭಾರತೀಯ ಜೋಡಿಯು, ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೇಷ್ಠ ಮಟ್ಟದ ರಕ್ಷಣಾ ಆಟವನ್ನು ಆಡಿತು. ತನ್ನ ಎದುರಾಳಿಯನ್ನು 39 ನಿಮಿಷಗಳಲ್ಲಿ 21-17, 21-15 ಗೇಮ್‌ಗಳಿಂದ ಸೋಲಿಸಿತು.

ಇದು ಹಾಲಿ ಋತುವಿನಲ್ಲಿ ಈ ಜೋಡಿಯ 3ನೇ ಸೆಮಿಫೈನಲ್ ಆಗಿದೆ. ಈ ವರ್ಷದ ಆರಂಭದಲ್ಲಿ ಅದು ಮಲೇಶ್ಯ ಓಪನ್ ಮತ್ತು ಇಂಡಿಯಾ ಓಪನ್‌ನಲ್ಲೂ ಸೆಮಿಫೈನಲ್ ಪ್ರವೇಶಿಸಿತ್ತು.

ಈ ಪಂದ್ಯಕ್ಕೂ ಮೊದಲು, ಮಾಜಿ ನಂಬರ್ ವನ್ ಭಾರತೀಯ ಜೋಡಿಯು ತನ್ನ ಮಲೇಶ್ಯದ ಎದುರಾಳಿ ಜೋಡಿಯ ವಿರುದ್ಧ 6 (ಜಯ)-2 (ಸೋಲು)ರ ದಾಖಲೆ ಹೊಂದಿತ್ತು. ಆದಾಗ್ಯೂ, ಮಲೇಶ್ಯ ಜೋಡಿಯ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News