×
Ad

ಮಹಿಳೆಯರ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್; ಆರು ವರ್ಷಗಳ ನಂತರ ಅಗ್ರಸ್ಥಾನಕ್ಕೇರಿದ ಸ್ಮತಿ ಮಂಧಾನ

Update: 2025-06-17 21:25 IST

 ಸ್ಮತಿ ಮಂಧಾನ | pc : bcci  

ಚೆನ್ನೈ: ಭಾರತ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮತಿ ಮಂಧಾನ ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. 2019ರ ನಂತರ ಇದೇ ಮೊದಲ ಬಾರಿ ಈ ಸಾಧನೆ ಮಾಡಿದ್ದಾರೆ.

ಸ್ಮತಿಯ ನಂತರ ಭಾರತದ ಇನ್ನಿಬ್ಬರು ಬ್ಯಾಟರ್‌ ಗಳಾದ ಜೆಮಿಮಾ ರೊಡ್ರಿಗಸ್ ಹಾಗೂ ನಾಯಕಿ ಹರ್ಮನ್‌ ಪ್ರೀತ್ ಕೌರ್ ಕ್ರಮವಾಗಿ 14ನೇ ಹಾಗೂ 15ನೇ ಸ್ಥಾನದಲ್ಲಿದ್ದಾರೆ.

28ರ ಹರೆಯದ ಸ್ಮತಿ ಮಂಧಾನ ಒಟ್ಟು 727 ಅಂಕಗಳನ್ನು ಗಳಿಸಿದ್ದು, ಇಂಗ್ಲೆಂಡ್ ನಾಯಕಿ ನಟಾಲಿ ಸಿವೆರ್-ಬ್ರೆಂಟ್(719), ದಕ್ಷಿಣ ಆಫ್ರಿಕಾ ನಾಯಕಿ ವಾಲ್ವಾರ್ಟ್(719 ಅಂಕ)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.

ಸ್ಮತಿ ಮಂಧಾನ ಇತ್ತೀಚೆಗಿನ ದಿನಗಳಲ್ಲಿ ಏಕದಿನ ಬ್ಯಾಟರ್‌ ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ-10ರೊಳಗೆ ಸ್ಥಾನ ಪಡೆಯುತ್ತಾ ಬಂದಿದ್ದು, ಎಡಗೈ ಆಟಗಾರ್ತಿ 6 ವರ್ಷಗಳಿಂದ ನಂ.1 ಸ್ಥಾನ ಪಡೆದಿರಲಿಲ್ಲ. ಇದೀಗ ನಂ.1 ಸ್ಥಾನ ದಕ್ಕಿಸಿಕೊಂಡಿದ್ದಾರೆ.

ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಕೊಲಂಬೊದಲ್ಲಿ ಇತ್ತೀಚೆಗೆ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ್ದರು.

ಟಿ-20 ಬ್ಯಾಟರ್‌ ಗಳ ಪಟ್ಟಿಯಲ್ಲಿ ಸ್ಮತಿ ಇದೀಗ 4ನೇ ರ್ಯಾಂಕಿನಲ್ಲಿದ್ದಾರೆ. 5 ಪಂದ್ಯಗಳ ಟಿ-20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ತೆರಳಲಿರುವ ಭಾರತ ತಂಡದಲ್ಲಿ ಸ್ಮತಿ ಸ್ಥಾನ ಪಡೆದಿದ್ದಾರೆ. ಜೂನ್ 28ರಂದು ಮೊದಲ ಪಂದ್ಯ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News