×
Ad

ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣ; ಏಶ್ಯನ್ ಚಾಂಪಿಯನ್‌ ಶಿಪ್‌ ನಿಂದ ಹಿಂದೆ ಸರಿದ ಸ್ನೇಹಾ ಕೊಲ್ಲೇರಿ

Update: 2025-05-25 22:25 IST

Photo Credit: STAN RAYAN

ಕೊಚ್ಚಿ: ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ದಕ್ಷಿಣ ಕೊರಿಯಾದಲ್ಲಿ ಈ ವಾರ ನಡೆಯಲಿರುವ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ಭಾರತೀಯ ತಂಡದಿಂದ 400 ಮೀ.ಓಟಗಾರ್ತಿ ಸ್ನೇಹಾ ಕೊಲ್ಲೇರಿ ಹಿಂದೆ ಸರಿದಿದ್ದಾರೆ.

ಸ್ನೇಹಾ ಡೋಪಿಂಗ್ ಟೆಸ್ಟ್‌ ನಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರು ಕೊರಿಯಾಕ್ಕೆ ಆಗಮಿಸುವುದಿಲ್ಲ ಎಂಬ ವಿಚಾರ ತಿಳಿದುಬಂತು ಎಂದು ನ್ಯಾಶನಲ್ ಚೀಫ್ ಕೋಚ್ ರಾಧಾಕೃಷ್ಣನ್ ನಾಯರ್ ಅವರು ‘ಸ್ಪೋರ್ಟ್ಸ್‌ಸ್ಟಾರ್’ಗೆ ರವಿವಾರ ತಿಳಿಸಿದ್ದಾರೆ.

ನಿಷೇಧಿತ ವಸ್ತುವಿನ ಬಗ್ಗೆ ಅಥವಾ ಡ್ರಗ್ಸ್ ಪರೀಕ್ಷೆಯನ್ನು ಯಾವಾಗ ನಡೆಸಲಾಗಿತ್ತು ಎಂಬ ಕುರಿತು ಯಾವುದೇ ವಿವರಗಳು ಲಭ್ಯವಾಗಿಲ್ಲ.

ತಾನು ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲನಾಗಿದ್ದೇನೆ ಎಂಬ ವಿಚಾರವನ್ನು ಸ್ನೇಹಾ ನಿರಾಕರಿಸಿದ್ದಾರೆ.

‘‘ನನಗೆ ಪಾದದ ಸ್ನಾಯು ನೋವು ಕಾಣಿಸಿಕೊಂಡಿದ್ದು, ಓಡಲು ಸಾಧ್ಯವಾಗುತ್ತಿಲ್ಲ’’ಎಂದು ತಿರುವನಂತಪುರದ 26ರ ವಯಸ್ಸಿನ ಓಟಗಾರ್ತಿ ಹೇಳಿದ್ದಾರೆ.

ಸ್ನೇಹಾ ಅವರು 2 ವಾರಗಳ ಹಿಂದೆ ಚೀನಾದಲ್ಲಿ ನಡೆದ ವರ್ಲ್ಡ್ ರಿಲೇಸ್‌ನಲ್ಲಿ ಭಾರತೀಯ ಮಿಕ್ಸೆಡ್ ರಿಲೇ ಟೀಮ್‌ನ ಭಾಗವಾಗಿದ್ದರು. ಇದು ಅವರ ಮೊದಲ ಅಂತರ್ ರಾಷ್ಟ್ರೀಯ ಸ್ಪರ್ಧೆಯಾಗಿತ್ತು. ಸ್ನೇಹಾ ಅವರು ಮಹಿಳೆಯರ ಹಾಗೂ ಮಿಕ್ಸೆಡ್ ರಿಲೇಗಳಲ್ಲಿ ಆಯ್ಕೆಯಾಗಿದ್ದರು.

ಕೇರಳದ ಅತ್ಲೀಟ್ ಸ್ನೇಹಾ ಅವರು ಐಶ್ವರ್ಯಾ ಮಿಶ್ರಾ, ರೂಪಾಲ್ ಚೌಧರಿ ಹಾಗೂ ವಿದ್ಯಾ ರಾಮ್‌ ರಾಜ್ ನಂತರ ಈ ವರ್ಷದ ಭಾರತದ 4ನೇ ವೇಗದ ಓಟಗಾರ್ತಿ ಎನಿಸಿಕೊಂಡಿದ್ದರು. ಕಳೆದ ತಿಂಗಳು ಕೊಚ್ಚಿಯಲ್ಲಿ ನಡೆದಿದ್ದ ಫೆಡರೇಶನ್ ನ್ಯಾಶನಲ್ಸ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ(53.00 ಸೆ.)ಗುರಿ ತಲುಪಿ ಕಂಚಿನ ಪದಕ ಜಯಿಸಿದ್ದರು.

ತಿರುವನಂತಪುರದಲ್ಲಿ ಮೇ 17ರಂದು ನಡೆದಿದ್ದ ಇಂಡಿಯನ್ ಗ್ರ್ಯಾಂಡ್ ಪ್ರಿನಲ್ಲಿ 200 ಮೀ. ಓಟದಲ್ಲಿ ವೈಯಕ್ತಿಕ ಶ್ರೇಷ್ಠ(23.59 ಸೆ.)ಸಮಯದಲ್ಲಿ ಗುರಿ ತಲುಪಿದ್ದರು.

*ಗಾಯಾಳು ಸಾಂಡ್ರಮೋಲ್ ಸಾಬು ಔಟ್

ಭಾರತದ ಇನ್ನೋರ್ವ 400 ಮೀ. ಸ್ಪರ್ಧಿ ಸಾಂಡ್ರಮೋಲ್ ಸಾಬು ಅವರು ಮೊಣಕಾಲು ನೋವಿನಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುವುದಿಲ್ಲ. ಹೀಗಾಗಿ ಭಾರತದ ರಿಲೇ ತಂಡ ದುರ್ಬಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News