ಟಿ20 ಕ್ರಿಕೆಟ್ | ಎಂ.ಎಸ್. ಧೋನಿ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್
ಮಹೇಂದ್ರ ಸಿಂಗ್ ಧೋನಿ | Photo: X \ @IPL
ವಿಶಾಖಪಟ್ಟಣ : ಹಿರಿಯ ವಿಕೆಟ್ಕೀಪರ್-ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಟಿ20 ವೃತ್ತಿಜೀವನದಲ್ಲಿ 300 ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ ಧೋನಿ ಈ ಸಾಧನೆ ಮಾಡಿದ ಮೊದಲ ವಿಕೆಟ್ಕೀಪರ್ ಎನಿಸಿಕೊಂಡರು. ಧೋನಿ ವಿಕೆಟ್ ಹಿಂಬದಿಯಲ್ಲಿ 213 ಕ್ಯಾಚ್ ಹಾಗೂ 57 ಸ್ಟಂಪಿಂಗ್ ಮಾಡಿದ್ದಾರೆ.
ರವಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದ ವೇಳೆ ರವೀಂದ್ರ ಜಡೇಜ ಬೌಲಿಂಗ್ನಲ್ಲಿ ಪೃಥ್ವಿ ಶಾ ನೀಡಿದ ಕ್ಯಾಚನ್ನು ಪಡೆಯುವ ಮೂಲಕ ಧೋನಿ ಈ ಸಾಧನೆ ಮಾಡಿದರು.
ಪಾಕಿಸ್ತಾನದ ಮಾಜಿ ಕೀಪರ್ ಕಮ್ರಾನ್ ಅಕ್ಮಲ್(274, 172 ಕ್ಯಾಚ್ಗಳು, 102 ಸ್ಟಂಪಿಂಗ್)ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ದಿನೇಶ್ ಕಾರ್ತಿಕ್(274, 207 ಕ್ಯಾಚ್ಗಳು, 67 ಸ್ಟಂಪಿಂಗ್) 3ನೇ ಸ್ಥಾನದಲ್ಲಿದ್ದರೆ, ಕ್ವಿಂಟನ್ ಡಿಕಾಕ್ (270, 221 ಕ್ಯಾಚ್ಗಳು, 49 ಸ್ಟಂಪಿಂಗ್ಸ್) 4ನೇ ಸ್ಥಾನದಲ್ಲಿದ್ದಾರೆ.
THE GREATEST EVER OF THE IPL...!!!
— Mufaddal Vohra (@mufaddal_vohra) March 31, 2024
- MS DHONI, THE GOAT. pic.twitter.com/OTxovY1AP9