ಭಾರತ-ಆಸ್ಟ್ರೇಲಿಯ ಸರಣಿ ಆರಂಭವಾಗಲು 50 ದಿನಗಳ ಮೊದಲೇ ಟಿಕೆಟ್ ಸೋಲ್ಡ್ ಔಟ್!
PC : NDTV
ಹೊಸದಿಲ್ಲಿ, ಆ.30: ಆಸ್ಟ್ರೇಲಿಯ ಹಾಗೂ ಭಾರತ ತಂಡಗಳ ನಡುವೆ ಸೀಮಿತ ಓವರ್ ಕ್ರಿಕೆಟ್ ಸರಣಿ ನಡೆಯಲಿರುವ ಎಲ್ಲ 8 ಕ್ರೀಡಾಂಗಣಗಳಲ್ಲಿ ಭಾರತೀಯ ಕ್ರೀಡಾಭಿಮಾನಿಗಳಿಗೆ ಮೀಸಲಿಟ್ಟಿದ್ದ ಎಲ್ಲ ಟಿಕೆಟ್ ಗಳು ಮಾರಾಟವಾಗಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಶುಕ್ರವಾರ ಪ್ರಕಟಿಸಿದೆ.
ಸರಣಿಯು ಅಕ್ಟೋಬರ್ 19ರಂದು ಪರ್ತ್ ನಲ್ಲಿ ಆರಂಭವಾಗಲಿದ್ದು ಸಿಡ್ನಿ ಹಾಗೂ ಕ್ಯಾನ್‌ಬೆರ್ರಾ ಪಂದ್ಯಗಳ ಸಾರ್ವಜನಿಕ ಟಿಕೆಟ್‌ಗಳು ಕೂಡ ಸಂಪೂರ್ಣವಾಗಿ ಬುಕ್ ಆಗಿವೆ.
ಸರಣಿಯಲ್ಲಿ 3 ಏಕದಿನ ಹಾಗೂ 5 ಟಿ-20 ಪಂದ್ಯಗಳು ನಡೆಯಲಿವೆ.
‘‘ಎಲ್ಲ 8 ಸ್ಥಳಗಳಲ್ಲಿ ಭಾರತೀಯ ಅಭಿಮಾನಿಗಳ ಅಗಾಧ ಪ್ರತಿಕ್ರಿಯೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ಎರಡು ಶ್ರೇಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವೆ ಮೈದಾನದಲ್ಲಿ ವಿಶ್ವ ದರ್ಜೆಯ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇವೆ’’ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಜನರಲ್ ಮ್ಯಾನೇಜರ್(ಈವೆಂಟ್ಸ್)ಜೋಯಲ್ ಮಾರಿಸನ್ ಹೇಳಿದರು.
ಏಕದಿನ ಸರಣಿಯು ಅ.19ರಂದು ಪರ್ತ್ ನಲ್ಲಿ ಆರಂಭವಾಗಲಿದ್ದು, ಆ ನಂತರ ಅ.23 ಹಾಗೂ 25ರಂದು ಅಡಿಲೇಡ್,ಸಿಡ್ನಿಯಲ್ಲಿ ನಡೆಯಲಿದೆ.
ಟಿ-20 ಸರಣಿಯು ಅ.29ರಂದು ಕ್ಯಾನ್‌ಬೆರ್ರಾದಲ್ಲಿ ಆರಂಭವಾಗಲಿದ್ದು, ಅ.31, ನ.2, 6 ಹಾಗೂ 8ರಂದು ನಡೆಯಲಿದೆ.