×
Ad

ಭಾರತೀಯರ 10 ಗರಿಷ್ಠ ಟೆಸ್ಟ್ ರನ್‌ಗಳು

Update: 2025-07-04 21:44 IST

ಬರ್ಮಿಂಗ್‌ಹ್ಯಾಮ್ (ಇಂಗ್ಲೆಂಡ್): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆ್ಯಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿರುವ ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧ 269 ರನ್ ಬಾರಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯರೊಬ್ಬರ ಏಳನೇ ಅತ್ಯಧಿತ ಮೊತ್ತವಾಗಿದೆ ಹಾಗೂ ಭಾರತೀಯ ನಾಯಕರ ಪೈಕಿ ನೂತನ ದಾಖಲೆಯಾಗಿದೆ. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬಾರಿಸಿರುವ 254 ರನ್‌ಗಳ ಮೊತ್ತವನ್ನು ಶುಭಮನ್ ಗಿಲ್ ಮೀರಿಸಿದ್ದಾರೆ.

ಶುಭಮನ್ ಗಿಲ್‌ರ ಈ ನಿರ್ವಹಣೆಯು ಅವರನ್ನು ಭಾರತೀಯ ಬ್ಯಾಟಿಂಗ್ ಶ್ರೇಷ್ಠರ ಪಟ್ಟಿಗೆ ಸೇರಿಸಿದೆ. ಆದರೆ, ಅವರು ಬ್ಯಾಟಿಂಗ್ ದಂತಕತೆ ವೀರೇಂದ್ರ ಸೆಹ್ವಾಗ್‌ಗಿಂತ ಹಿಂದಿದ್ದಾರೆ. ಅತ್ಯಧಿತ ಟೆಸ್ಟ್ ರನ್ ಗಳಿಸಿರುವ ಭಾರತೀಯ ಎಂಬ ದಾಖಲೆ ಸೆಹ್ವಾಗ್ ಹೆಸರಿನಲ್ಲಿದೆ. 2008ರಲ್ಲಿ ಚೆನ್ನೈಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ 319 ರನ್ ಸಿಡಿಸಿದ್ದಾರೆ. ಅದೂ ಅಲ್ಲದೆ, ಸೆಹ್ವಾಗ್ ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಇನ್ನೊಂದು ತ್ರಿಶತಕ ಬಾರಿಸಿದ್ದಾರೆ.

ತ್ರಿಶತಕ ಬಾರಿಸಿದ ಇನ್ನೋರ್ವ ಭಾರತೀಯ ಕ್ರಿಕೆಟಿಗನೆಂದರೆ ಕರುಣ್ ನಾಯರ್. ಅವರು 2016ರಲ್ಲಿ ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ್ದಾರೆ.

ವೀರೇಂದ್ರ ಸೆಹ್ವಾಗ್      319      ದಕ್ಷಿಣ ಆಫ್ರಿಕ      ಚೆನ್ನೈ-2008

ವೀರೇಂದ್ರ ಸೆಹ್ವಾಗ್       309      ಪಾಕಿಸ್ತಾನ          ಮುಲ್ತಾನ್- 2004

ಕರುಣ್ ನಾಯರ್        303        ಇಂಗ್ಲೆಂಡ್         ಚೆನ್ನೈ- 2016

ವೀರೇಂದ್ರ ಸೆಹ್ವಾಗ್     293       ಶ್ರೀಲಂಕಾ           2009

ವಿ.ವಿ.ಎಸ್. ಲಕ್ಷ್ಮಣ್     281       ಆಸ್ಟ್ರೇಲಿಯ        ಕೋಲ್ಕತ- 2001

ರಾಹುಲ್ ದ್ರಾವಿಡ್      270       ಪಾಕಿಸ್ತಾನ          ರಾವಲ್ಪಿಂಡಿ- 2004

ಶುಭಮನ್ ಗಿಲ್          269       ಇಂಗ್ಲೆಂಡ್          ಬರ್ಮಿಂಗ್‌ಹ್ಯಾಮ್- 2025

ವಿರಾಟ್ ಕೊಹ್ಲಿ        254*       ದಕ್ಷಿಣ ಆಫ್ರಿಕಾ     ಪುಣೆ- 2019

ವೀರೇಂದ್ರ ಸೆಹ್ವಾಗ್    254       ಪಾಕಿಸ್ತಾನ            ಲಾಹೋರ್- 2006

ಸಚಿನ್ ತೆಂಡುಲ್ಕರ್  248*      ಬಾಂಗ್ಲಾದೇಶ          ಢಾಕಾ- 2004

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News