ಐಪಿಎಲ್ ಇತಿಹಾಸದಲ್ಲಿ 7,500 ರನ್ ಗಳಿಸಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ
Update: 2024-04-06 21:26 IST
ವಿರಾಟ್ ಕೊಹ್ಲಿ | Photo: @IPL
ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ 7,500 ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.
ರಾಜಸ್ಥಾನ ರಾಯಲ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ನ 19ನೇ ಪಂದ್ಯದಲ್ಲಿ ಕೊಹ್ಲಿ ಈ ಐತಿಹಾಸಿಕ ಸಾಧನೆ ಮಾಡಿದರು.
ಕೊಹ್ಲಿಗೆ 7,500 ರನ್ ಪೂರೈಸಲು 34 ರನ್ ಅಗತ್ಯವಿತ್ತು. RCB ಇನಿಂಗ್ಸ್ ನ 7ನೇ ಓವರ್ ನಲ್ಲಿ ಆರ್. ಅಶ್ವಿನ್ ಬೌಲಿಂಗ್ ನಲ್ಲಿ ಒಂದು ರನ್ ಗಳಿಸಿ ಈ ಮೈಲಿಗಲ್ಲು ತಲುಪಿದರು.
ಕೊಹ್ಲಿ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ 7,000ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ. ಶಿಖರ್ ಧವನ್(6,755 ರನ್)ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
35ರ ಹರೆಯದ ಕೊಹ್ಲಿ ಇಂದು ಐಪಿಎಲ್ ಟೂರ್ನಿಯಲ್ಲಿ 8ನೇ ಶತಕವನ್ನು ಗಳಿಸಿದರು. ಪ್ರಸಕ್ತ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಪಡೆಯುವ ಆರೆಂಜ್ ಕ್ಯಾಪನ್ನು ತನ್ನದಾಗಿಸಿಕೊಂಡಿದ್ದಾರೆ.