×
Ad

ಪಾಕ್‌ ವಿರುದ್ಧದ ವಿಶ್ವಕಪ್‌ ಪಂದ್ಯಕ್ಕೆ ತಪ್ಪಾದ ಜರ್ಸಿ ಧರಿಸಿ ಬಂದ ವಿರಾಟ್‌ ಕೊಹ್ಲಿ!

Update: 2023-10-14 16:46 IST

Photo: X/@writopath

ಅಹ್ಮದಾಬಾದ್: ಇಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಶ್ವಕಪ್‌ 2023 ಪಂದ್ಯಕ್ಕಾಗಿ ಮೈದಾನಕ್ಕೆ ತಪ್ಪಾದ ಜರ್ಸಿ ಧರಿಸಿ ವಿರಾಟ್‌ ಕೊಹ್ಲಿ ಆಗಮಿಸಿದ ಘಟನೆ ನಡೆದಿದೆ. ಪಂದ್ಯದ ಮಧ್ಯದಲ್ಲಿಯೇ ಅಂಗಣದಿಂದ ಹೊರನಡೆದು ಜರ್ಸಿ ಬದಲಾಯಿಸಿ ನಂತರ ಕೊಹ್ಲಿ ಆಗಮಿಸಿದರು.

ಭಾರತ ತಂಡದ ಇತರ ಆಟಗಾರರು ಧರಿಸಿದ್ದ ಜರ್ಸಿಯ ಭುಜ ಭಾಗದಲ್ಲಿ ತ್ರಿವರ್ಣ ಗೆರೆಗಳಿದ್ದರೆ ಕೊಹ್ಲಿ ಧರಿಸಿದ್ದ ಜರ್ಸಿಯಲ್ಲಿ ಮೂರು ಬಿಳಿಯ ಗೆರೆಗಳಿದ್ದವು. ಇದು ಕೊಹ್ಲಿ ಗಮನಕ್ಕೆ ಪಂದ್ಯದ ನಡುವೆ ಬಂದು ಅವರು ತಕ್ಷಣ ಅಂಗಣದಿಂದ ಹೊರ ಹೋಗಿ ನಂತರ ಸರಿಯಾದ ಜರ್ಸಿ ಧರಿಸಿ ಬಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News