×
Ad

ವೆಸ್ಟ್ ಇಂಡೀಸ್ ನ ದಢೂತಿ ಕ್ರಿಕೆಟಿಗ ಕಾರ್ನ್ ವಾಲ್ ರನೌಟ್ ವೀಡಿಯೊ ವೈರಲ್

Update: 2023-08-18 12:26 IST

Photo: Twitter

ಬಾರ್ಬಡೋಸ್: ವೃತ್ತಿಪರ ಕ್ರಿಕೆಟ್ ನಲ್ಲಿ ‘ದಢೂತಿ’ ಆಟಗಾರನಾಗಿರುವ ರಹಕೀಮ್ ಕಾರ್ನ್ ವಾಲ್ ಅವರು ಮೈದಾನಕ್ಕೆ ಬಂದಾಗಲೆಲ್ಲಾ ಅಭಿಮಾನಿಗಳ ಗಮನವನ್ನು ಸೆಳೆಯುತ್ತಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2023 ರಲ್ಲಿ ಬಾರ್ಬಡೋಸ್ ರಾಯಲ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ಆಲ್-ರೌಂಡರ್ ಕಾರ್ನ್ ವಾಲ್ ಇನಿಂಗ್ಸ್ ನ ಮೊದಲ ಎಸೆತದಲ್ಲಿ ಒಂಟಿ ರನ್ ಪಡೆಯವ ಪ್ರಯತ್ನದಲ್ಲಿದ್ದಾಗ ಸುಲಭವಾಗಿ ರನೌಟಾದರು.

200 ಕ್ಕೂ ಹೆಚ್ಚು ರನ್ ಗಳ ಗುರಿಯನ್ನು ಬೆನ್ನಟ್ಟಿದ ಬಾರ್ಬಡೋಸ್ ತಂಡಕ್ಕೆ ತ್ವರಿತ ರನ್ ಗಳಿಸುವ ಅಗತ್ಯವಿದೆ ಎಂದು ತಿಳಿದಿದ್ದ ಕಾರ್ನ್ ವಾಲ್ ಆರಂಭದಲ್ಲಿ ವಿಕೆಟ್ ಗಳ ನಡುವೆ ವೇಗವಾಗಿ ಓಡುವಲ್ಲಿ ವಿಫಲರಾದರು. ಕಾರ್ನ್ ವಾಲ್ ರನೌಟಾಗುವ ದೃಶ್ಯವು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ವೆಸ್ಟ್ ಇಂಡೀಸ್ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್ ಆಗಿರುವ ಕಾರ್ನ್ ವಾಲ್ ದಢೂತಿ ದೇಹದಿಂದಾಗಿ ಅಭಿಮಾನಿಗಳಲ್ಲಿ ಆಗಾಗ್ಗೆ ಚರ್ಚೆಯ ವಿಷಯವಾಗುತ್ತಾರೆ. ಅನೇಕ ಕ್ರಿಕೆಟ್ ಪಂಡಿತರು, ಮಾಜಿ ತಾರೆಯರು ಮತ್ತು ತಜ್ಞರು ಕಾರ್ನ್ ವಾಲ್ ಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

"ನನ್ನ ದೇಹದ ರಚನೆಯನ್ನು ನನಗೆ ಬದಲಾಯಿಸಲು ಸಾಧ್ಯವಿಲ್ಲ, ನಾನು ತುಂಬಾ ಎತ್ತರವಿದ್ದೇನೆ ಎಂದು ನಾನು ಹೇಳಲಾರೆ, ಎಲ್ಲರೂ ಸ್ಲಿಮ್ ಆಗುವುದಿಲ್ಲ, ನಾನು ಕ್ರೀಸ್ ಗೆ ಹೋಗಿ ನನ್ನ ಕೌಶಲ್ಯವನ್ನು ತೋರಿಸುವೆ. ನಾನು ಹೆಚ್ಚು ತೂಕವಿದ್ದೇನೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ನಾನು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ನಾನು ತೂಕದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಹಾಗೂ ಸೋಮಾರಿಯಾಗುವುದಿಲ್ಲ. ನಾನು ನನ್ನ ಫಿಟ್ ನೆಸ್ ಗಾಗಿ ಸಾಕಷ್ಟು ಸಮಯವನ್ನು ಕಳೆಯುತ್ತೇನೆ'' ಎಂದು ಕಾರ್ನ್ ವಾಲ್  ESPNCricinfo ಚಾಟ್ ನಲ್ಲಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News