ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ : ಪದಕ ಗೆದ್ದ ಭಾರತದ ಏಕ್ತಾ ಭ್ಯಾನ್, ಪ್ರವೀಣ್, ಸೋಮನ್ ರಾಣಾ
Update: 2025-10-04 23:39 IST
Photo Credit: SHIV KUMAR PUSHPAKAR
ಹೊಸದಿಲ್ಲಿ, ಅ. 4: ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್‌ನಲ್ಲಿ ಶನಿವಾರ ಏಕ್ತಾ ಭ್ಯಾನ್, ಪ್ರವೀಣ್ ಕುಮಾರ್ ಮತ್ತು ಸೋಮನ್ ರಾಣಾ ಭಾರತದ ಪಟ್ಟಿಗೆ ಇನ್ನೂ ಮೂರು ಪದಕಗಳನ್ನು ಸೇರಿಸಿದ್ದಾರೆ.
ಮಹಿಳೆಯರ ಕ್ಲಬ್ ತ್ರೋ ಎಫ್51 ಸ್ಪರ್ಧೆಯಲ್ಲಿ 19.80 ಮೀಟರ್ ಸಾಧನೆಯೊಂದಿಗೆ ಏಕ್ತಾ ಬೆಳ್ಳಿ ಗೆದ್ದರು.
ಪುರುಷರ ಹೈಜಂಪ್ ಟಿ64 ಸ್ಪರ್ಧೆಯಲ್ಲಿ, ಪ್ಯಾರಾಲಿಂಪಿಕ್ಸ್ ಹಾಗೂ ಏಶ್ಯನ್ ಗೇಮ್ಸ್ ಚಾಂಪಿಯನ್ ಪ್ರವೀಣ್ 2 ಮೀ. ಎತ್ತರಕ್ಕೆ ಹಾರಿ ಕಂಚು ಪಡೆದರು.
ಪುರುಷರ ಶಾಟ್‌ಪುಟ್ ಎಫ್57 ಸ್ಪರ್ಧೆಯಲ್ಲಿ ಭಾರತದ ಸೋಮನ್ 14.69 ಮೀಟರ್ ಸಾಧನೆಯೊಂದಿಗೆ ಕಂಚು ಪಡೆದರು.
ಭಾರತ ಈವರೆಗೆ 6 ಚಿನ್ನ, 6 ಬೆಳ್ಳಿ ಮತ್ತು 6 ಕಂಚು ಸಹಿತ ಒಟ್ಟು 18 ಪದಕಗಳನ್ನು ಗೆದ್ದಿದೆ. ರವಿವಾರ ಪಂದ್ಯಾವಳಿಯ ಕೊನೆಯ ದಿನವಾಗಿದೆ.