×
Ad

IML 25 | 43ರ ಹರೆಯದಲ್ಲೂ ಅದ್ಭುತ ಕ್ಯಾಚ್ ಹಿಡಿದು ಮನಸೂರೆಗೊಂಡ ಯುವರಾಜ್ ಸಿಂಗ್!

Update: 2025-02-23 15:27 IST

ಯುವರಾಜ್ ಸಿಂಗ್ | PC : X  

ಮುಂಬೈ: ಭಾರತ ತಂಡ ಕಂಡ ಅತ್ಯುತ್ತಮ ಫೀಲ್ಡರ್ ಗಳ ಪೈಕಿ ಒಬ್ಬರಾದ ಯುವರಾಜ್ ಸಿಂಗ್, ತಮ್ಮ 43ರ ಹರೆಯದಲ್ಲೂ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ.

ಇಂಟರ್ ನ್ಯಾಶನಲ್ ಮಾಸ್ಟರ್ಸ್ ಲೀಗ್ ಪ್ರಯುಕ್ತ ಇಲ್ಲಿ ಶನಿವಾರ ನಡೆದ ಇಂಡಿಯಾ ಮಾಸ್ಟರ್ಸ್ ಹಾಗೂ ಶ್ರೀ ಲಂಕಾ ಮಾಸ್ಟರ್ಸ್ ನಡುವಿನ ಪಂದ್ಯದ ವೇಳೆ ಬೌಂಡರಿ ಗೆರೆಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಯುವರಾಜ್ ಸಿಂಗ್, ಅಭಿಮಾನಿಗಳು ಕುಣಿಯುವಂತೆ ಮಾಡಿದರು.

ಇರ್ಫಾನ್ ಪಠಾಣ್ ಬೌಲಿಂಗ್ ನಲ್ಲಿ ಶ್ರೀ ಲಂಕಾ ಬ್ಯಾಟರ್ ಲಾಹಿರು ತಿರುಮನೆ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಇದ್ದ ಯುವರಾಜ್ ಸಿಂಗ್ ಮೇಲೆ ಹಾರಿ ಅದ್ಭುತವಾಗಿ ಕ್ಯಾಚ್ ಹಿಡಿದರು. ಯುವರಾಜ್ ಸಿಂಗ್ ರ ಈ ಅದ್ಭುತ ಕ್ಯಾಚ್ ಕಂಡು ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು.

ನವಿ ಮುಂಬೈನಲ್ಲಿ ನಡೆದ ಈ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡ, ಶ್ರೀಲಂಕಾ ಮಾಸ್ಟರ್ಸ್ ತಂಡವನ್ನು 4 ರನ್ ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್ ತಂಡ ಗುರ್ಕೀರತ್ ಸಿಂಗ್ (44), ಸ್ಟುವರ್ಟ್ ಬಿನ್ನಿ (68), ಯುವರಾಜ್ ಸಿಂಗ್ (ಔಟಾಗದೆ 31) ಹಾಗೂ ಯೂಸುಫ್ ಪಠಾಣ್ (ಔಟಾಗದೆ 56) ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.

ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ ಮಾಸ್ಟರ್ಸ್ ತಂಡದ ಪರ 51 ರನ್ ಗಳಿಸಿದ ಕುಮಾರ್ ಸಂಗಕ್ಕಾರ ಗರಿಷ್ಠ ಸ್ಕೋರರ್ ಎನಿಸಿದರು. ಮೂರು ವಿಕೆಟ್ ಪಡೆದ ಇರ್ಫಾನ್ ಪಠಾಣ್, ಇಂಡಿಯಾ ಮಾಸ್ಟರ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News